ಕ್ರೈಂ

ಹಿಂದೂ ಕಾರ್ಯಕರ್ತನ ಬರ್ಬರ ಕೊಲೆ

351
Spread the love

ಶಿವಮೊಗ್ಗ: ಹಿಂದೂ ಕಾರ್ಯಕರ್ತನೊರ್ವನ ಭೀಕರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ನಗರದಲ್ಲಿ ಇಂದು ರಾತ್ರಿ ನಡೆದಿದೆ. ಸೀಗೆಹಟ್ಟಿ ನಿವಾಸಿ ಹರ್ಷ (26) ಕೊಲೆಯಾದ ದುರ್ದೈವಿ.

ರಾತ್ರಿ 9 ರ ಸುಮಾರಿಗೆ ಶಿವಮೊಗ್ಗ ನಗರದ ಕಾಮತ್ ಪೆಟ್ರೊಲ್ ಬಂಕ್ ಸಮೀಪ ಯುವಕನೋರ್ವನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಆತನ ಮೇಲೆರಗಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಡೊಡ್ಡಪೇಟೆ ಠಾಣ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದ್ದು, ಹಿಂದೂ ಸಂಘಟನೆಯೊಂದರ ಸಕ್ರೀಯ ಕಾರ್ಯಕರ್ತನಾಗಿದ್ದ.

See also  ವಾಟ್ಸಾಪ್‌ ಮಾಹಿತಿ ನಂಬಿ ಮೊಸಗೊಳಗಾದ ಪುತ್ತೂರಿನ ವ್ಯಕ್ತಿ..! ವಂಚಕರು ಖಾತೆಯಿಂದ 22 ಲಕ್ಷ ರೂ. ವರ್ಗಾಯಿಸಿಕೊಂಡದ್ದೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget