ರಾಜಕೀಯರಾಜ್ಯವೈರಲ್ ನ್ಯೂಸ್

ಕುಮಾರಸ್ವಾಮಿಗೆ ನಾಳೆ(ಜೂ.5) ದೆಹಲಿಗೆ ಬರುವಂತೆ ಅಮಿತ್ ಶಾರಿಂದ ಕರೆ..! ಇಲ್ಲಿದೆ ಸಂಪೂರ್ಣ ಮಾಹಿತಿ

226

ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿದ್ದು, ಬುಧವಾರ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಬುಧವಾರ ಎನ್​ಡಿಎ ಸಭೆ ನಡೆಯಲಿದೆ. ಅದರಲ್ಲಿ ಹಾಜರಾಗುವಂತೆ ಕುಮಾರಸ್ವಾಮಿಗೆ ಸೂಚನೆ ನೀಡಲಾಗಿದೆ.

ಹೀಗಾಗಿ ಗೆದ್ದ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಂಜೆ 7 ಗಂಟೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಬಳಿಕ ನಾಳೆ ಎನ್​​ಡಿಎ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಇಷ್ಟೇ ಅಲ್ಲದೆ, ಎನ್​ಡಿಎ ಸಣ್ಣ ಮಿತ್ರ ಪಕ್ಷಗಳ ನಾಯಕರಿಗೆ ಅಮಿತ್ ಶಾ ಫೋನ್ ಕರೆ ಮಾಡಿದ್ದಾರೆ. ಬಿಹಾರದ ಸಣ್ಣ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಹಿಂದೂಸ್ತಾನಿ ಅವಾಮಿ ಮೋರ್ಚಾ ಅಧ್ಯಕ್ಷ ಜಿತಿನ್ ರಾಮ್ ಮಾಂಝಿ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಜೊತೆ ಚರ್ಚೆ ಮಾಡಿದ್ದಾರೆ. ಎನ್​ಡಿಎ ಜೊತೆ ಗಟ್ಟಿಯಾಗಿ ನಿಲ್ಲುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/pradeep-eshwar-and-resignation-after-defeated
https://newsnotout.com/2024/06/election-and-tv-court-issued-notice
https://newsnotout.com/2024/06/strong-room-key-kannada-news-vijayapura
See also  ಕಾರ್ಕಳ:ಕುಟುಂಬ ಸಮೇತ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget