ಕ್ರೀಡೆ/ಸಿನಿಮಾ

ಕ್ಯಾಚ್ ಬಿಟ್ಟಿದ್ದಕ್ಕೆ ಸಹ ಆಟಗಾರನ ಕಪಾಳಕ್ಕೆ ಬಾರಿಸಿದ ಪಾಕ್ ಬೌಲರ್

318
Spread the love

ಕರಾಚಿ:  ಕ್ರಿಕೆಟ್ ಜಗತ್ತು ತಲೆ ತಗ್ಗಿಸುವಂತಹ ಮತ್ತೊಂದು ಘಟನೆಗೆ ಪಾಕ್ ಸೂಪರ್ ಲೀಗ್​ ಸಾಕ್ಷಿಯಾಗಿದೆ. ಪಾಕ್ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ (Haris Rauf) ಮೈದಾನದಲ್ಲೇ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ ಅವರ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ. ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್​ನಲ್ಲಿ ಈರೀತಿಯ ಘಟನೆ ನಡೆದಿರುವುದು ಅನೇಕ ಕ್ರಿಕೆಟ್ ಪಂಡಿತರ ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ಪಿಎಸ್​ಎಲ್ 2022ರ ಸೋಮವಾರ ರಾತ್ರಿ ನಡೆದ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಣ ರೋಚಕ ಪಂದ್ಯದಲ್ಲಿ ಸಂಭವಿಸಿದೆ. ಪೇಶಾವರ್ ಝಲ್ಮಿ ಬ್ಯಾಟಿಂಗ್​​ಗೆ ಇಳಿದ ಸಂದರ್ಭ ಈ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್ ತಂಡದ ಬೌಲರ್ ಹ್ಯಾರಿಸ್ ರೌಫ್ ಓವರ್​ನಲ್ಲಿ ಪೇಶಾವರ್ ತಂಡದ ಬ್ಯಾಟರ್ ಹರ್ಜತುಲ್ಲಾ ಝಝಾಯ್ ಅವರ ಕ್ಯಾಚನ್ನು ಕಮ್ರಾನ್ ಗುಲಾಮ್  ಕೈಚೆಲ್ಲಿದರು. ಇದರಿಂದ ರೌಫ್ ಕೋಪಗೊಂಡರು. ನಂತರ ಇದೇ ಓವರ್​ನಲ್ಲಿ ಮತ್ತೊಬ್ಬ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಅನ್ನು ರೌಫ್ ಪಡೆದುಕೊಂಡರು. ಫಾಹಾದ್ ಅಹ್ಮದ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ರೌಫ್ ಮೊದಲ ವಿಕೆಟ್ ಕಿತ್ತರು.

ವಿಕೆಟ್ ಪಡೆದ ಖುಷಿಯಲ್ಲಿ ಸಹ ಆಟಗಾರರ ಜೊತೆ ರೌಫ್ ಸಂಭ್ರಮಿಸುತ್ತಿರುವಾಗ ಅಲ್ಲಿಗೆ ಕಮ್ರಾನ್ ಗುಲಾಮ್ ಕೂಡ ಖುಷಿಯಲ್ಲಿ ಪಾಲ್ಗೊಳ್ಳಲು ಬಂದರು. ಇನ್ನೇನು ಗುಲಾಮ್ ಕೈಕೊಟ್ಟು ಶುಭಕೋರಬೇಕು ಎನ್ನುವಷ್ಟರಲ್ಲಿ ರೌಫ್ ಇವರ ಕಪಾಳಕ್ಕೆ ಹೊಡೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. 

See also  ನಟಿ ಸಾಯಿಪಲ್ಲವಿಗೆ ದಿಢೀರ್ ಮದುವೆ,ಪಡ್ಡೆ ಹುಡುಗರು ಶಾಕ್ ..!ಸೈಲೆಂಟಾಗಿ ಖ್ಯಾತ ನಿರ್ದೇಶಕನನ್ನು ಮದುವೆಯಾಗಿದ್ದೇಕೆ?
  Ad Widget   Ad Widget   Ad Widget   Ad Widget   Ad Widget   Ad Widget