ಸುಳ್ಯ: ಸಂಪಾಜೆ ಗ್ರಾಮದ ಸಂಜೀವಿನಿ ಕಟ್ಟಡದಲ್ಲಿ ಮಹಿಳಾ ಗ್ರಾಮ ಸಭೆ ಸಂಜೀವಿನಿ ಸ್ವ ಸಹಾಯ ಸಂಘಗಳ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸ್ವ ಸಹಾಯ ಸಂಘ ಹಾಗೂ ಮಹಿಳಾ ಗ್ರಾಮ ಸಭೆ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಹಲವು ವಿಚಾರ ಚರ್ಚೆ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಂದರಿ ಮುಂದಡ್ಕ, ವಿಮಲಾ ಪ್ರಸಾದ್, ರಜನಿ ಶರತ್, ತಾಲೂಕು ಪಂಚಾಯತ್ ನ ಹರಿಣಾಕ್ಷಿ, ನೇತ್ರಾವತಿ, ದಮಯಂತಿ, ಅಂಗನವಾಡಿ ಕಾರ್ಯಕರ್ತರು ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಹಾಜರಿದ್ದರು.