ಕಡಬ: ಬಂಟ್ವಾಳ ತಾಲೂಕು ಕಛೇರಿ ಪ್ರಥಮ ದರ್ಜೆ ಸಹಾಯಕ ಗೋಪಾಲ ಕಲ್ಲುಗುಡ್ಡೆ ಅವರು ಉಪ ತಹಶೀಲ್ದಾರ್ ಆಗಿ ಬಡ್ತಿ ಪಡೆದಿದ್ದಾರೆ. ಇದೀಗ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸಂಪಾಜೆ ನಾಡ ಕಚೇರಿಗೆ ವರ್ಗಾವಣೆ ಗೊಂಡಿದ್ದಾರೆ. ಬಂಟ್ವಾಳದಲ್ಲಿ ಗ್ರಾಮಕರಣಿಕ ಹುದ್ದೆಗೆ ಸೇರ್ಪೆಡೆಗೊಂಡ ಗೋಪಾಲ ಅವರು ಬಳಿಕ ಪುತ್ತೂರು ತಾಲೂಕು ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿಗೊಂಡು ಬಂಟ್ವಾಳ ತಾಲೂಕು ಕಛೇರಿಗೆ ವರ್ಗಾವಣೆಗೊಂಡಿದ್ದರು. ಕಳೆದ ಐದು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಗೆ ನಿಯೋಜನೆ ಮೇರೆಗೆ ಮಂಗಳೂರು ತಾಲೂಕು ಕಛೇರಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.
previous post