ಅರಂತೋಡು : ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಗೂನಡ್ಕದ ಸಲೀಂ ಎಂಬ ಯುವಕನಿಗೆ ದಾವಣಗೆರೆಯ ಬೊಲೆರೋ ವಾಹನ ಡಿಕ್ಕಿ ಹೊಡೆದು ಯುವಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಗೂನಡ್ಕದಲ್ಲಿ ನಡೆದಿದೆ. ಬೈಕ್ ಗೆ ಡಿಕ್ಕಿ ಹೊಡೆದು ಬೊಲೆರೋ ಚಾಲಕ ವಾಹವನ್ನು ಮುಂದಕ್ಕೆ ವಾಹನ ಚಲಾಯಿಸಿಕೊಂಡು ಸಾಗಿದ ಬಳಿಕ ಸ್ಥಳೀಯರು ಬೊಲೆರೋವನ್ನು ಚಟ್ಟೆಕಲ್ಲು ಎಂಬಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನಿಗೆ ಸುಳ್ಯದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.