ಕರಾವಳಿ

ಗೋಳಿತ್ತೊಟ್ಟು: ಮದ್ಯದಂಗಡಿ ಗಲಾಟೆ, ಹೊಸ ಬಾರ್ ಆರಂಭಕ್ಕೆ ಸ್ಥಳೀಯರ ವಿರೋಧ

438

ಗೋಳಿತ್ತೊಟ್ಟು: ಇಲ್ಲಿನ ಸಮರ ಗುಂಡಿ ಎಂಬಲ್ಲಿ ತಲೆ ಎತ್ತಿರುವ ಬಾರ್ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾರ್ ತೆರೆಯುವುದನ್ನು ಖಂಡಿಸಿರುವ ಅಕ್ಕಪಕ್ಕದ ಮನೆಯವರು ಇದೀಗ ಪ್ರತಿಭಟನೆಗಾಗಿ ಬೀದಿಗಿಳಿದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಗೋಳಿತೊಟ್ಟಿನ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸಮರ ಗುಂಡಿ ಎಂಬಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿವೆ. ಕೃಷಿ ಚಟುವಟಿಕೆಯ ತಾಣವಾಗಿರುವ ಹಾಗೂ ಅಂಗನವಾಡಿ, ಮದರಸ ಇರುವಂತಹ ಸ್ಥಳದಲ್ಲಿ ಬಾರ್ ವೊಂದು ಇದ್ದಕ್ಕಿದ್ದಂತೆ ತಲೆ ಎತ್ತಿದೆ.

ಇದರಿಂದ ಸ್ಥಳೀಯರಿಗೆ ಅನೇಕ ಸಮಸ್ಯೆಗಳಾಗುತ್ತಿವೆ ಅನ್ನುವ ದೂರುಗಳು ಕೇಳಿ ಬರುತ್ತಿವೆ. ಕೂಡಲೇ ಬಾರ್ ಅನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

See also  ಮಹಿಳೆಯರೇ ಮುಟ್ಟಿನ ಕಪ್ ಬಗ್ಗೆ ತಿಳಿಯಿರಿ, ಏನಿದು ಮುಟ್ಟಿನ ಕಪ್..? ಕೆವಿಜಿ ವೈದ್ಯೆ ಗೀತಾ ದೊಪ್ಪ ಹೇಳಿದ್ದೇನು..?
  Ad Widget   Ad Widget   Ad Widget   Ad Widget