ಉಡುಪಿ: ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ದೇಶಕ್ಕೆ ಮೊದಲ ಅಥ್ಲೆಟಿಕ್ಸ್ ಪದಕ ತಂದಿರುವ ನೀರಜ್ ಚೋಪ್ರಾ ಸಾಧನೆಗೆ ದೇಶದೆಲ್ಲೆಡೆ ಸಂಭ್ರಮ ಆಚರಿಸಲಾಗುತ್ತಿದೆ. ಅಂತೆಯೇ ಸ್ವಚ್ಛ ಭಾರತ್ ಫ್ರೆಂಡ್ಸ್ ಸದಸ್ಯರು ಉಡುಪಿಯ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ತ್ರಿವರ್ಣ ಧ್ವಜ ಹಿಡಿದು, ಘೋಷಣೆಗಳನ್ನು ಕೂಗಿ ಸರಳ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದರು. ಕ್ಲೀನ್ ಉಡುಪಿ ಪ್ರಾಜೆಕ್ಟ್ ಸಂಚಾಲಕ ಡಾ. ಆರ್.ಎನ್. ಭಟ್ ಅವರು ನೀರಜ್ ಚೋಪ್ರಾ ಸಾಧನೆಯ ಸವಿನೆನಪಿಗಾಗಿ ಸಸಿಗಳನ್ನು ನೆಟ್ಟರು. ಜಗದೀಶ್ ಶೆಟ್ಟಿ, ಸಂತೋಷ್ ನಾಯ್ಕ್, ರಾಘವೇಂದ್ರ ಪ್ರಭು ಕರ್ವಾಲು, ನಾಗರಾಜ್ ಕಿದಿಯೂರು, ಉದಯ ನಾಯ್ಕ್, ಗಣೇಶ್ ಪ್ರಸಾದ್ ಜಿ. ನಾಯಕ್ ಉಪಸ್ಥಿತರಿದ್ದರು.