Latest

ಮದುವೆಯಾಗದೇ ಹೋದ್ರೆ ಇಲ್ಲಿನ ಯುವಕ,ಯುವತಿಯರಿಗೆ ವಿಚಿತ್ರ ಶಿಕ್ಷೆ!!ಈ ಶಿಕ್ಷೆ ಅನುಭವಿಸಿದ ಮೇಲೆ ಕೂಡಲೇ ಸಂಗಾತಿ ಸಿಗುತ್ತಾರಂತೆ!!ಅಷ್ಟಕ್ಕೂ ಏನದು ಪನಿಶ್ ಮೆಂಟ್‌?

642
Spread the love

ನ್ಯೂಸ್‌ ನಾಟೌಟ್: ನಮ್ಮ ದೇಶದಲ್ಲಿ ಮದುವೆಯಾಗಲೇ ಬೇಕೆಂಬ ಕಡ್ಡಾಯವಿಲ್ಲ.. ಅಥವಾ ಇಂಥದ್ದೇ ವಯಸ್ಸಿಗೆ ಮದುವೆಯಾಗಿ ಬಿಡಬೇಕೆಂಬ ರೂಲ್ಸ್ ಕೂಡ ಇಲ್ಲ.. ಮದುವೆಯಾಗದಿದ್ದರೆ ಯಾವ ಶಿಕ್ಷೆಗಳು ನಮ್ಮ ದೇಶದಲ್ಲಿಲ್ಲ. ಆದರೆ ಇಲ್ಲಿ ಮಾತ್ರ 25 ವರ್ಷದೊಳಗೆ ಯುವಕ/ಯುವತಿ ಮದುವೆಯಾಗದಿದ್ದರೆ ವಿಚಿತ್ರ ಶಿಕ್ಷೆ ಅನುಭವಿಸಬೇಕಾಗುತ್ತದೆ!!ಅಷ್ಟಕ್ಕೂ ಆ ದೇಶ ಯಾವುದು ಗೊತ್ತಾ? ಏನದು ವಿಚಿತ್ರ ಶಿಕ್ಷೆ?!

ಹೌದು, ಡೆನ್ಮಾರ್ಕ್ ದೇಶದಲ್ಲಿ ಬೇರೆಯದೇ ಆದ ಪದ್ಧತಿ ಇದೆ. ಅಲ್ಲಿ, ಒಬ್ಬ ಹುಡುಗ ಅಥವಾ ಹುಡುಗಿ 25 ವರ್ಷ ವಯಸ್ಸಿನವರೆಗೆ ಮದುವೆಯಾಗದಿದ್ದರೆ, ಅವನ/ಅವಳ ಇಡೀ ದೇಹವನ್ನು ದಾಲ್ಚಿನ್ನಿಯಿಂದ ತೊಳೆಯಲಾಗುತ್ತದೆ. 30 ವರ್ಷವಾಗಿದ್ದರೆ, ಕರಿಮೆಣಸಿನೊಂದಿಗೆ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಲಾಗುತ್ತದೆ. ಇದು ಎಲ್ಲಿ ಏಕೆ ಸಂಭವಿಸುತ್ತದೆ ಎಂಬುವುದನ್ನು ನೋಡೋದಾದ್ರೆ ..ಈ ದೇಶದಲ್ಲಿ 25 ವರ್ಷ ತುಂಬಿದ ಯುವಕ/ಯುವತಿಗೆ ಮದುವೆಯಾಗಿಲ್ಲ ಎಂದರೆ, ಅಥವಾ ವಿವಾಹವಾಗಲು ಒಪ್ಪಿಲ್ಲ ಎಂದರೆ ಅವರಿಗೆ ಈ ಪದ್ಧತಿ ಆಚರಣೆ ಮಾಡಲಾಗುತ್ತೆ. ಅಷ್ಟಕ್ಕೂ ಇದನ್ನು ಇಲ್ಲಿ ತಮಾಷೆಗೆ ಮಾಡಲಾಗುತ್ತದೆ. ಇದು ಇಲ್ಲಿನ ಸಾಮಾನ್ಯ ಪದ್ಧತಿ ಎಂದು ನಂಬಲಾಗಿದೆ.

ಅವನ/ಅವಳ ಇಡೀ ದೇಹವನ್ನು ಅಂದರೆ, ಕಾಲಿನ ಹೆಬ್ಬರಳಿನಿಂದ ತಲೆಯವರೆಗೂ ದಾಲ್ಚಿನ್ನಿಯಿಂದ ಚೆನ್ನಾಗಿ ಸ್ನಾನ ಮಾಡಿಸುತ್ತಾರೆ. ಈ ಸ್ನಾನ ಪ್ರಕ್ರಿಯೆಯನ್ನು ಮನೆಯಲ್ಲಿ ಮಾಡಿಸಲ್ಲ ಓಣಿ ಅಥವಾ ಬೀದಿಗಳಲ್ಲಿ ಮಾಡಿಸುತ್ತಾರೆ. ಒಂದು ವೇಳೆ ಯುವಕನಿಗೆ 30 ವರ್ಷ ತುಂಬಿದಾಗ ಕರಿಮೆಣಸಿನೊಂದಿಗೆ ಸ್ನಾನವನ್ನು ಮಾಡಿಸುತ್ತಾರೆ ಅನ್ನೋದು ವಿಶೇಷ.

ವರದಿಗಳ ಪ್ರಕಾರ, ಈ ಸಂಪ್ರದಾಯ ತುಂಬಾ ಹಳೆಯದು. ಕೆಲ ಶತಮಾನಗಳ ಹಿಂದೆ ಇಲ್ಲಿನ ಜನರು ಮಸಾಲೆ ಮಾರಾಟ ಮಾಡಲು ವರ್ಷಾನುಗಟ್ಟಲೆ ಬೇರೆಡೆಗೆ ತೆರಳುತ್ತಿದ್ದರಂತೆ, ಇದರಿಂದ ಅವರಿಗೆ ಮದುವೆ ಲೇಟ್ ಆಗಿ ಆಗುತ್ತಿತ್ತು. ಆದ್ದರಿಂದ ಇಡೀ ದೇಹವನ್ನು ದಾಲ್ಚಿನ್ನಿಯಿಂದ ಮತ್ತು ಕರಿಮೆಣಸಿನೊಂದಿಗೆ ಸ್ನಾನ ಮಾಡಿಸಿದರೆ ಕೂಡಲೇ ಸಂಗಾತಿ ಸಿಗುತ್ತಾರೆ ಎಂಬ ನಂಬಿಕೆ ಅಲ್ಲಿ ಈಗಲೂ ಇದೆ.

See also  ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯ ಸೊಂಟಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ..! ಆರೋಪಿ ವಶಕ್ಕೆ
  Ad Widget   Ad Widget   Ad Widget   Ad Widget   Ad Widget   Ad Widget