ಕ್ರೈಂ

ಪ್ರಿಯಕರನ ಸಾವಿನಿಂದ ನೊಂದು ನೇಣಿಗೆ ಶರಣಾದ ಯುವತಿ..!

819

ಕಲಬುರಗಿ: ಪ್ರಿಯಕರನ ಸಾವಿನಿಂದ ನೊಂದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದ ಕ್ವಾಟರ್ಸ್ ನಲ್ಲಿ ನಡೆದಿದೆ. ಪ್ರಿಯಕರನ ಸಾವಿನ ಬೆನ್ನಲ್ಲೇ ಯುವತಿಗೆ ಬೇರೆ ಮದುವೆ ನಿಶ್ಚಿಯಿಸಿದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

18 ವರ್ಷ ವಯಸ್ಸಿನ ಶೃತಿ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಈಕೆಯ ಪ್ರಿಯಕರ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದ ಎನ್ನಲಾಗಿದೆ. ಪ್ರಿಯಕರನ ಸಾವಿನಿಂದ ಯುವತಿ ತೀವ್ರವಾಗಿ ನೊಂದಿದ್ದಳು. ಕೆಲವು ದಿನಗಳ ಕಾಲ ಆಹಾರ ಕೂಡ ತ್ಯಜಿಸಿದ್ದಳು ಎನ್ನಲಾಗಿದೆ. 

See also  ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ವಿಜ್ಞಾನಿಯ ಕಾರಿನ ಗಾಜು ಪುಡಿಗೈದ ಕಿಡಿಗೇಡಿಗಳು..! ಯುವ ವಿಜ್ಞಾನಿಯ ಮೇಲೆ ಎರಗಿದ್ದೇಕೆ..?
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget