ಜೀವನಶೈಲಿ

ಗರ್ಲ್ಸ್ ಫ್ರೆಂಡ್‌ಗೆ ಪ್ರಪೋಸ್ ಮಾಡಬೇಕೆನ್ನುವವರಿಗೆ ಈ ದಿನವೇ ಸೂಕ್ತ.. ಯಾಕೆ ಗೊತ್ತಾ?

459

ನವದೆಹಲಿ: ಫೆಬ್ರವರಿ ಬಂದರೆ ಸಾಕು ಪ್ರೇಮಿಗಳ ಮನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಕೋಪ, ಮನಸ್ತಾಪ, ಸಿಟ್ಟು ಎಷ್ಟೇ ಇದ್ದರೂ ಪ್ರೀತಿ ಮಾತ್ರ ಕಡಿಮೆ ಆಗಲ್ಲ. ಹೌದು, ಪ್ರೀತಿ ಎಲ್ಲಿ ಇರುತ್ತೋ.. ಜಗಳನೂ ಅಲ್ಲೇ ಇರುತ್ತದೆ. ಏಳು ವಿಶೇಷ ದಿನಗಳಲ್ಲಿ ಎರಡನೇ ದಿನ ಅಂದರೆ ಫೆಬ್ರವರಿ ೮ಕ್ಕೆ ತೀರಾ ವಿಶೇಷವಾಗಿರುತ್ತದೆ. ಕಾರಣ ಬೆಟ್ಟದಷ್ಟು ಪ್ರೀತಿಯನ್ನು ಭದ್ರವಾಗಿ ಕಾಪಾಡಿಕೊಂಡು ತನ್ನ ಸಂಗಾತಿಗೆ ತಿಳಿಸುವ ದಿನವಾಗಿರುತ್ತದೆ. ಅದೇ ಪ್ರಪೋಸ್ ಡೇ.

ಗಂಡು ಅಥವಾ ಹೆಣ್ಣು ತನ್ನ ಕನಸಿನ ಹುಡುಗ/ ಹುಡುಗಿ ಕಣ್ಣು ಮುಂದೆ ಬಂದಾಗ ಮನಸ್ಸು ಖುಷಿಯಲ್ಲಿ ತೇಲುತ್ತದೆ. ಎಂದೂ ಸಿಗದ ಆನಂದ ಆ ಘಳಿಗೆ ಗಳಿಸುತ್ತದೆ. ಆದರೆ ಕದ್ದು ಕುಳಿತಿರುವ ಪ್ರೀತಿಯನ್ನು ಹೇಳಲು ಭಯ ಬಿಡಲ್ಲ. ಒಂದು ಹೆಜ್ಜೆ ಮುಂದೆ ಇಟ್ಟು ಪ್ರೀತಿಯನ್ನು ಹೇಳಲೇಬೇಕು ಅನಿಸುತ್ತದೆ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಧೈರ್ಯ ಮಾಡಿ ಪ್ರೀತಿ ವಿಷಯ ತಿಳಿಸಿಬಿಡೋಣ ಅನಿಸುತ್ತೆ. ಆದರೆ ಅದಕ್ಕೆ ಒಳ್ಳೆಯ ದಿನ ಯಾವಾಗ ಬರುತ್ತೆ ಅಂತ ತಲೆಬಿಸಿಯೂ ಶುರುವಾಗುತ್ತೆ. ಈ ಬಗ್ಗೆ ಚಿಂತೆ ಬೇಡ. ಫೆಬ್ರವರಿ ೮ಕ್ಕೆ ಒಳ್ಳೆಯ ದಿನ. ಪ್ರಪೋಸ್ ಡೇ ದಿನ ನಿಮ್ಮ ಕನಸಿನ ಹುಡುಗ/ ಹುಡುಗಿಗೆ ಪ್ರಪೋಸ್ ಮಾಡಿಬಿಡಿ. ಅಂದು ಪ್ರಪೋಸ್ ಮಾಡಿದರೆ ನಿಮ್ಮ ಪ್ರೀತಿ ನಿಮಗೆ ಸಿಕ್ಕಿದರೂ ಸಿಗಬಹುದು.

See also  Schizophrenia: ಇಂದು ʼವಿಶ್ವ ಸ್ಕಿಜೋಫ್ರೇನಿಯಾʼ ದಿನ, ಈ ಮನಸ್ಸಿನ ಕಾಯಿಲೆ ʼಸ್ಕಿಜೋಫ್ರೇನಿಯಾʼ ಬಲು ಡೇಂಜರ್..! ಏನಿದರ ಲಕ್ಷಣ..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌
  Ad Widget   Ad Widget   Ad Widget   Ad Widget