ಕ್ರೀಡೆ/ಸಿನಿಮಾ

ಪದಕ ಗೆಲ್ಲಲಾಗದಿದ್ದರೂ ಹೃದಯಗಳ ಗೆದ್ದ ಟೋಕಿಯೋ ಒಲಿಂಪಿಕ್ ಸ್ಟಾರ್‌ಗಳಿಗೆ ಟಾಟಾ ಅಲ್ಟ್ರೋಜ್ ಕಾರು ಗಿಫ್ಟ್!

983

ಬೆಂಗಳೂರು:  ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಕ್ರೀಡಾಪಟುಗಳಿಗೆ ಟಾಟಾ ಮೋಟಾರ್ಸ್ ಭರ್ಜರಿ ಗಿಫ್ಟ್ ನೀಡಿದೆ. ಟಾಟಾದ ಅತ್ಯುತ್ತಮ ಹಾಗೂ 5 ಸ್ಟಾರ್ ಸುರಕ್ಷತೆಯ ಟಾಟಾ ಅಲ್ಟ್ರೋಜ್ ಕಾರು ಉಡುಗೊರೆಯಾಗಿ ನೀಡಿದೆ.   ಭಾರತೀಯ ಕ್ರೀಡಾಪಟುಗಳಲ್ಲಿ ಕೆಲವರು ಉತ್ತಮ ಹೋರಾಟದ ಹೊರತಾಗಿಯೂ ಪದಕವನ್ನು ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ.  ಅವರು ಪದಕ ಗೆಲ್ಲದೇ ಇರಬಹುದು ಆದರೆ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಅತ್ಯುತ್ತಮ ಪ್ರದರ್ಶನಗಳ ಮೂಲಕ ಶತಕೋಟಿ ಜನರನ್ನು ಪ್ರೇರೇಪಿಸಿದ್ದಾರೆ. ಈ ಕ್ರೀಡಾಪಟುಗಳನ್ನು ಹುರಿದುಂಬಿಸಲು ಟಾಟಾ ಮೋಟಾರ್ಸ್ ಹೈ ಸ್ಟ್ರೀಟ್ ಗೋಲ್ಡ್ ಬಣ್ಣದ ಆಲ್ಟ್ರೋಜ್ ಅನ್ನು ಪ್ರತಿಯೊಬ್ಬ ಆಟಗಾರರಿಗೂ ಹಸ್ತಾಂತರಿಸಲಾಯಿತು. 

ಅಲ್ಟ್ರೋಜ್ ಕಾರು ಉಡುಗೊರೆಯಾಗಿ ಪಡೆದ ಕ್ರೀಡಾಪಟುಗಳು


1    ನೇಹಾ ಗೋಯಲ್  ( ಹಾಕಿ)         
2    ರಾಣಿ ರಾಂಪಾಲ್   ( ಹಾಕಿ)         
3    ನವನೀತ್ ಕೌರ್  ( ಹಾಕಿ)      
4    ಉದಿತಾ      ( ಹಾಕಿ)   
5    ವಂದನಾ ಕಟಾರಿಯಾ ( ಹಾಕಿ)         
6    ನಿಶಾ ವಾರ್ಸಿ  ( ಹಾಕಿ) 
7    ಸವಿತಾ ಪುನಿಯಾ   ( ಹಾಕಿ)        
8    ಮೋನಿಕಾ ಮಲಿಕ್   ( ಹಾಕಿ)       
9    ದೀಪ್ ಗ್ರೇಸ್ ಎಕ್ಕಾ  ( ಹಾಕಿ)        
10    ಗುರ್ಜಿತ್ ಕೌರ್   ( ಹಾಕಿ)        
11    ನವಜೋತ್ ಕೌರ್  ( ಹಾಕಿ)         
12    ಶರ್ಮಿಳಾ ದೇವಿ   ( ಹಾಕಿ)
13    ಲಾಲ್ರೆಮ್ಸಿಯಾಮಿ   ( ಹಾಕಿ)
14    ಸುಶೀಲಾ ಚಾನು  ( ಹಾಕಿ)
15    ಸಲೀಮಾ ಟೆಟೆ   ( ಹಾಕಿ)
16    ನಿಕ್ಕಿ ಪ್ರಧಾನ್   ( ಹಾಕಿ)
17    ರಜನಿ ಎತಿಮರ್ಪು   ( ಹಾಕಿ)
18    ರೀನಾ ಖೋಕರ್   ( ಹಾಕಿ)
19    ನಮಿತಾ ತೋಪ್ಪೋ   ( ಹಾಕಿ)
20    ಅದಿತಿ ಅಶೋಕ್   ( ಗಾಲ್ಫ್)
21    ದೀಪಕ್ ಪುನಿಯಾ    (ಕುಸ್ತಿ 86 ಕೆಜಿ)
22    ಕಮಲ್ ಪ್ರೀತ್ ಕೌರ್   ( ಡಿಸ್ಕಸ್ ಥ್ರೋ)
23    ಸತೀಶ್ ಕುಮಾರ್    (ಬಾಕ್ಸಿಂಗ್ 91 ಕೆಜಿ)
24    ಪೂಜಾ ರಾಣಿ    (ಬಾಕ್ಸಿಂಗ್ 75 ಕೆಜಿ)

See also  ಕೊಹ್ಲಿ ಪೋಸ್ಟರ್ ​ಗೆ ಮೇಕೆ ಕಡಿದು ರಕ್ತಾಭಿಷೇಕ..! ಅಂಧಾಭಿಮಾನಿಗಳ ವಿರುದ್ಧ ದೂರು ದಾಖಲು
  Ad Widget   Ad Widget   Ad Widget   Ad Widget   Ad Widget   Ad Widget   Ad Widget