ಅರಂತೋಡು: ಇಲ್ಲಿನ ಸಮೀಪದ ಗೂನಡ್ಕದ ರೋಯಲ್ ಪ್ರೆಂಡ್ಸ್ ವತಿಯಿಂದ ಇಂದು ಗಾಂಧಿ ಜಯಂತಿಯನ್ನು ಗಾಂಧಿ ಘೋಷಣೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಯಲ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಾಜಿದ್ ಐ.ಜಿ.ವಹಿಸಿದರು. ಪರಿಸರ ಸ್ನೇಹಿ ಅಬ್ದುಲ್ ಖಾದರ್ ಕುಂಭಕ್ಕೋಡ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್, ಅಬೂಸಾಲಿ, ಕ್ಲಬ್ ನ ಸ್ಥಾಪಕಾಧ್ಯಕ್ಷ ಜಿ.ಜಿ.ನವೀನ್, ಅಜರುದ್ದೀನ್, ಖಾಶಿಂ ರಾಝ್, ಉಬೈಸ್,ಇಜಾಸ್, ಶರೀಫ್ ಪಾಂಡಿ ,ಸಲೀಂ ,ಹರ್ಶಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.