ಉಪ್ಪಾರಪಳಿಕೆ: ಮಹಾತ್ಮ ಗಾಂಧಿ ತಾತ ಎಂದರೆ ಎಲ್ಲ ಮಕ್ಕಳಿಗೂ ಅಚ್ಚು ಮೆಚ್ಚು. ಗಾಂಧೀಜಿಯ ತತ್ವ, ಆದರ್ಶ ಪ್ರತಿಯೊಬ್ಬ ಮಗುವಿಗೂ ಆದರ್ಶ. ಇಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದ ಉಪ್ಪಾರಪಳಿಕೆ ಅಂಗನವಾಡಿಯಲ್ಲೂ ಗಾಂಧಿ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಇದೇ ವೇಳೆ ಈಗಷ್ಟೇ ಅಂಗನವಾಡಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಗಾಂಧೀಜಿಯನ್ನು ಬೆರಗುಗಣ್ಣಿನಿಂದಲೇ ನೋಡಿ ಸಂಭ್ರಮಿಸಿದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
previous post