ಬೆಂಗಳೂರು

ಬೆಂಗಳೂರು: ಫುಡ್ ಡೆಲಿವರಿ ಬಾಯ್ ನಿಂದ ಯುವತಿಗೆ ಕಿರುಕುಳ, ದೂರು ದಾಖಲು

364
Spread the love

ಬೆಂಗಳೂರು: ಹೆಣ್ಣು ಮಕ್ಕಳು ಫುಡ್ ಆರ್ಡರ್ ಮಾಡುವಾಗ ಇನ್ನು ಮುಂದೆ ಸ್ವಲ್ಪ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಇಲ್ಲೊಬ್ಬ ಫುಡ್ ಡೆಲಿವರಿ ಬಾಯ್ ಯುವತಿಗೆ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ನಡೆದಿದೆ.

ಮೊಬೈಲ್ ಗೆ ಅಶ್ಲೀಲ ಫೋಟೋ ಕಳಿಸಿ ಕಿರಿಕಿರಿ ಮಾಡಿದ ಯುವಕನ ವಿರುದ್ಧ ಯುವತಿ ಸ್ನೇಹಿತ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮಾಡಿದ್ದಾನೆ. ಬಿಹಾರದ ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಫುಡ್ ಡೆಲಿವರಿ ಮಾಡಿದ ನಂತರವೂ ಮೆಸೆಜ್ ಮಾಡಿರುವ ಡೆಲಿವರಿ ಬಾಯ್, ನಿನ್ನ ಸ್ನೇಹಿತ ಎಂದು ಹೇಳಿಕೊಂಡು ವಾಟ್ಸ್ಅಪ್ ಮೆಸೆಜ್ ಮಾಡಿದ್ದಾನೆ. ಮಧ್ಯರಾತ್ರಿ 11 ಗಂಟೆಗೆ ಮೆಸೆಜ್, ಕಾಲ್ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಪ್ರಿಂಕ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್​ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

See also  ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ
  Ad Widget   Ad Widget   Ad Widget   Ad Widget   Ad Widget   Ad Widget