ಹೊಂಡಗುಂಡಿ ರಸ್ತೆ: ವಿದೇಶದಲ್ಲೂ ರಸ್ತೆ ಮಧ್ಯದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ..!

4

ಫ್ಲೋರಿಡಾ:  ರಸ್ತೆಯಲ್ಲಿ ಗುಂಡಿಗಳಾದ ಸಂದರ್ಭದಲ್ಲಿ ಬಾಳೆ ಗಿಡವನ್ನು ನೆಟ್ಟು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಭಾರತದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ. ಇಂತಹ ಪ್ರತಿಭಟನೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲೂ ಭಾರತದ ಮಾದರಿಯಲ್ಲೇ ಪ್ರತಿಭಟನೆ ನಡೆಯುತ್ತದೆ ಅನ್ನುವುದು ವರದಿಯಾಗಿದೆ.

ಫ್ಲೋರಿಡಾ ವ್ಯಕ್ತಿ ಬ್ರ್ಯಾನ್ ರೇಮಂಡ್ ದೊಡ್ಡ ದೊಡ್ಡ ಗುಂಡಿಗಳ ರಸ್ತೆಯಲ್ಲಿ ಪ್ರಯಾಣ ಮಾಡಿ ತಾಳ್ಮೆ ಕಳೆದುಕೊಂಡಿದ್ದಾನೆ. ರಸ್ತೆ ಸರಿಪಡಿಸಲು ಹಲವು ಮನವಿಗಳನ್ನು ಸಲ್ಲಿಸಿದ್ದಾನೆ. ಆದರೆ ಯಾವುದು ಪ್ರಯೋಜನವಾಗಿಲ್ಲ. ಹೀಗಾಗಿ ರಸ್ತೆಯಲ್ಲಿನ ದೊಡ್ಡ ದೊಡ್ಡ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ಫ್ಲೋರಿಡಾದ ಹೊಂಡಾ ಡ್ರೈವ್ ಖಾಸಗಿ ರಸ್ತೆ. ಫೋರ್ಟ್ ಮೆಯರ್ಸ್ ಅಧಿಕಾರಿಗಳು ಈ ರಸ್ತೆ ನಿರ್ವಹಣೆ ಮಾಡುತ್ತಾರೆ. ಆದರೆ ಪ್ರತಿ ದಿನ ಇದೇ ರಸ್ತೆಯಲ್ಲಿ ಸಾಗುವ ಬ್ರ್ಯಾನ್ ರೇಮೆಂಡ್ ಬೇಸತ್ತಿದ್ದಾನೆ. ತನ್ನ ಕಾರುಗಳು ರಸ್ತೆ ಗುಂಡಿಗಳಲ್ಲಿ ಬಿದ್ದು ಹಾಳಾಗಿದೆ. ಹಲವು ಅಪಘಾತಗಳು ಸಂಭವಿಸಿದೆ. ಹೀಗಾಗಿ ಬಾಳೆ ಗಿಡ ನೆಟ್ಟರೆ ಎಲ್ಲರ ಗಮನಕ್ಕೆ ಬರುತ್ತದೆ. ಇಷ್ಟೇ ಅಲ್ಲ ಪ್ರಯಾಣಿಕರು ಗುಂಡಿ ಇರುವುದನ್ನು ಗಮನಿಸಿ ಮುಂದೆ ಸಾಗಬಹುದು ಎಂದು ರೇಮಂಡ್ ಹೇಳಿದ್ದಾನೆ.

Related Articles

Latestಕ್ರೈಂದೇಶ-ಪ್ರಪಂಚದೇಶ-ವಿದೇಶರಾಜ್ಯ

ತಲೆಗೆ ಗುಂಡು ತಗುಲಿ ಕರ್ನಾಟಕ ಮೂಲದ ಯೋಧ ಸಾವು..! ‘ಮಿಸ್‌ಫೈರ್‌’ ಎಂದ ಸೇನಾಧಿಕಾರಿ..!

ನ್ಯೂಸ್‌ ನಾಟೌಟ್: ಬೆಳಗಾವಿಯ ಮೂಡಲಗಿ ತಾಲೂನಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಬುಧವಾರ...

Latestಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅತಿಯಾದ ಸಾಲ ಮಾಡಿದ್ದ ಕುಡುಕ ಗಂಡ..! ಸಾಲ ವಸೂಲಿಗೆ ಬರ್ತಿದ್ದ ಯುವಕನನ್ನೇ ಮದುವೆಯಾದ ಮಹಿಳೆ..!

ನ್ಯೂಸ್‌ ನಾಟೌಟ್: ಗಂಡನ ಅತಿಯಾದ ಮದ್ಯಪಾನದ ಚಟದಿಂದ ಬೇಸತ್ತಿದ್ದ ಪತ್ನಿ, ಆತನ ಸಾಲ ವಸೂಲಿಗೆ ಬರುತ್ತಿದ್ದ...

Latestದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಆಂಧ್ರದ ಓಂಗೋಲ್ ತಳಿಯ ಹಸು ಬ್ರೆಜಿಲ್‌ ನಲ್ಲಿ 41 ಕೋಟಿಗೆ ಹರಾಜು..! ಜಗತ್ತಿನ ಅತೀ ದುಬಾರಿ ಹಸು..!

ನ್ಯೂಸ್‌ ನಾಟೌಟ್: ಆಂಧ್ರಪ್ರದೇಶದ ಓಂಗೋಲ್ ತಳಿಯ ಹಸು, ಬ್ರೆಜಿಲ್‌ ನಲ್ಲಿ 41 ಕೋಟಿಗೆ ಹರಾಜಾಗಿದೆ. ಇದೀಗ...

Latestಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅನುಮಾನಗೊಂಡು ಸ್ಮಶಾನದಲ್ಲಿ ಸಿಸಿಟಿವಿ​ ಅಳವಡಿಸಿದ ಸ್ಥಳೀಯರಿಗೆ ಕಂಡದ್ದೇನು..?

ನ್ಯೂಸ್‌ ನಾಟೌಟ್: ಮಧ್ಯಪ್ರದೇಶದ ಭೋಪಾಲ್ ​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ...

@2025 – News Not Out. All Rights Reserved. Designed and Developed by

Whirl Designs Logo