ನ್ಯೂಸ್ ನಾಟೌಟ್: ಟೋಕಿಯೊದ ರೆಸ್ಟೋರೆಂಟ್ ಮಾಲೀಕನೊಬ್ಬ ದುಬಾರಿ ಅಂತ್ಯಕ್ರಿಯೆಯ ವೆಚ್ಚವನ್ನು ತಪ್ಪಿಸಲು ಎರಡು ವರ್ಷಗಳ ಕಾಲ ತನ್ನ ತಂದೆಯ ಮೃತದೇಹವನ್ನು ವಾರ್ಡ್ರೋಬ್ ನಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಜಪಾನ್ ನಲ್ಲಿ 56 ವರ್ಷದ ವ್ಯಕ್ತಿಯೊಬ್ಬ ಜನವರಿ 2023ರಲ್ಲಿ ಮರಣಹೊಂದಿದ ತನ್ನ ತಂದೆಯ ಮರಣದ ನಂತರ ಅಂತ್ಯಕ್ರಿಯೆಯ ವೆಚ್ಚವನ್ನು ತಪ್ಪಿಸಲು ಎರಡು ವರ್ಷಗಳ ಕಾಲ ಶವವನ್ನು ಕೆದಂತೆ ವ್ಯವಸ್ಥೆ ಮಾಡಿ ತನ್ನ ಮನೆಯ ಕಪಾಟಿನಲ್ಲಿ ಅಡಗಿಸಿಟ್ಟಿದ್ದ ಎನ್ನಲಾಗಿದೆ. ಜಪಾನ್ ನ ಟೋಕಿಯೊದಲ್ಲಿರುವ ನೊಬುಹಿಕೊ ಸುಜುಕ್ ಎಂಬವರ ಚೈನೀಸ್ ರೆಸ್ಟೋರೆಂಟ್ ಒಂದು ವಾರ ಮುಚ್ಚಲ್ಪಟ್ಟಾಗ ಕೃತ್ಯಗಳು ಇತರರ ಅನುಮಾನದಿಂದ ಘಟನೆ ಬೆಳಕಿಗೆ ಬಂದಿವೆ. ಇದು ನೆರೆಹೊರೆಯವರಲ್ಲಿ ಕಳವಳವನ್ನು ಉಂಟುಮಾಡಿತ್ತು. ನಂತರ ಅವರು ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಮನೆಗೆ ಹೋದಾಗ, ಬೀರುವಿನಲ್ಲಿ ಅವನ ತಂದೆಯ ಅಸ್ಥಿಪಂಜರ ಸಿಕ್ಕಿದೆ.
ಮಗನಾದ ನೊಬುಹಿಕೊ ಸುಜುಕಿಯನ್ನು ವಿಚಾರಣೆ ನಡೆಸಿದಾಗ, ತನ್ನ ತಂದೆ ಜನವರಿ 2023 ರಲ್ಲಿ 86 ನೇ ವಯಸ್ಸಿನಲ್ಲಿ ನಿಧನರಾದರು. ತಂದೆಯ ಮರಣದ ನಂತರ, ದೇಹವನ್ನು ಮರೆಮಾಡಿದೆ. ತಂದೆಯ ಸಾವಿನ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ ಆದರೆ ಆ ದಿನ ಕೆಲಸದಿಂದ ಮನೆಗೆ ಹಿಂದಿರುಗಿದಾಗ, ತನ್ನ ತಂದೆಯ ನಿರ್ಜೀವ ದೇಹವನ್ನು ಕಂಡೆ. ಆಗ ನನಗೆ ಅಂತ್ಯಕ್ರಿಯೆ ತುಂಬಾ ದುಬಾರಿಯಾಗಿತ್ತು. ಹೀಗಾಗಿ ಮೃತದೇಹವನ್ನು ಮುಚ್ಚಿಟ್ಟೆ ಎಂದು ಹೇಳಿಕೊಂಡಿದ್ದಾನೆ.
ಸುಜುಕ್ ನ್ನು ಬಂಧಿಸಲಾಗಿದೆ, ತಂದೆಯ ಆಸ್ತಿ, ಪಿಂಚಣಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.