ಕ್ರೈಂ

ಫೇಸ್​ಬುಕ್​​ನಲ್ಲಿ ಮಹಿಳೆಯರ ಫೋಟೋ ಹಾಕಿ ಕಿರುಕುಳ

334
Spread the love

ಬೆಂಗಳೂರು: ಫೇಸ್​ಬುಕ್​​ನಲ್ಲಿ ಮಹಿಳೆಯ ಫೋಟೋ ಹಾಕಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಂದ್ರಶೇಖರ ಅಲಿಯಾಸ್​ ಡಾರ್ಲಿಂಗ್ ಚಂದು (35) ಎಂಬಾತ ಅಪರಾಧಿ ಎಂದು ಹೇಳಲಾಗಿದೆ. ಫೋಟೋ ಜೊತೆ ಮಹಿಳೆ ಕಾಂಟ್ಯಾಕ್ಟ್ ನಂಬರ್ ಪೋಸ್ಟ್ ಮಾಡಿದ್ದ ಆರೋಪಿ ಕಿರುಕುಳ ನೀಡಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆಯ ದೂರು ಆಧರಿಸಿ ಬಾಗಲಗುಂಟೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಮಹಿಳೆಯ ಫೋಟೋ ಜೊತೆ ಕಾಂಟ್ಯಾಕ್ಟ್ ನಂಬರ್ ಕೂಡ ಪೋಸ್ಟ್ ಮಾಡುತ್ತಿದ್ದ. ಕಿರುಕುಳಕ್ಕೆ ಬೇಸತ್ತ ಮಹಿಳೆಯಿಂದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಅರೋಪಿಯನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

See also  ಗೋಳಿತೊಟ್ಟು: ಟ್ಯಾಂಕರ್-ಬೈಕ್ ಡಿಕ್ಕಿ: ಬೈಕ್ ಸವಾರರ ಸ್ಥಿತಿ ಗಂಭೀರ
  Ad Widget   Ad Widget   Ad Widget   Ad Widget   Ad Widget   Ad Widget