ಕ್ರೈಂ

ಮಕ್ಕಳಾಗಿಲ್ಲ ಎಂದು ಪತ್ನಿಗೆ ಟೆಕ್ಕಿ ನಿತ್ಯ ಕಿರಿಕ್..! ಮನನೊಂದು ಇಂಜಿನೀಯರ್ ಪತ್ನಿ ಆತ್ಮಹತ್ಯೆ

ಬೆಂಗಳೂರು: ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಪತಿ ನೀಡುತ್ತಿದ್ದ ಹಿಂಸೆಯನ್ನು ತಾಳಲಾರದೆ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀರಣ್ಣಪಾಳ್ಯದ ನಿವಾಸಿ ಸಂಗೀತಾ(26) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ  ಮಹಿಳೆ. ಸಂಗೀತಾ ಮೂಲತಃ ಮಂಡ್ಯದವರು.

ಕಳೆದ ಒಂದೂವರೆ ವರ್ಷದ ಹಿಂದೆ ನೆಲಮಂಗಲ ಮೂಲದ ವಿನಯ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಕುಟುಂಬದಲ್ಲಿ ಬಿರುಕು ಉಂಟಾಗಿತ್ತು. ದಂಪತಿ ಇಬ್ಬರೂ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್​​​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಗುವಾಗಿಲ್ಲ ಎಂಬ ವಿಚಾರವಾಗಿ ಗಂಡ ವಿನಯ್ ಈಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಸಂಗೀತಾ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಮಾಜಿ ಸಚಿವ ಹೆಚ್.ಡಿ ರೇವಣ್ಣನಿಗೆ ನ್ಯಾಯಂಗ ಬಂಧನ, ಮುಂದಿನ 7 ದಿನ ಜೈಲುವಾಸ

ಅಜ್ಜನ ರಿವಾಲ್ವರ್ ಹಿಡಿದು ಮನೆ ಮೇಲೆ ಮನಸೋ ಇಚ್ಛೆ ಫೈರಿಂಗ್ ಮಾಡಿದ ಮೊಮ್ಮಗ! ಎಸ್ಪಿ ಡಿಸಿಗೆ ಪತ್ರ ಬರೆದದ್ದೇಕೆ..?

ಸುಳ್ಯ: ಮಹಿಳೆಯರು ಮಕ್ಕಳಿದ್ದ ಶಿಫ್ಟ್ ಕಾರಿಗೆ ಗುದ್ದಿ ಪರಾರಿ! ಹಿಟ್ ಆ್ಯಂಡ್ ರನ್ ಮಾಡಿದ ಕಾರಿನವ ಸಿಕ್ಕಿಬಿದ್ದಿದ್ದೆಲ್ಲಿ..?