ದೇಶ-ಪ್ರಪಂಚ

ರಾಷ್ಟ್ರೀಯ ಹೆದ್ದಾರಿಗೆ ಬಂದು ವಾಕಿಂಗ್ ಮಾಡಿ ಎರಡು ಗಂಟೆ ಟ್ರಾಫಿಕ್ ಜಾಮ್‌ ಮಾಡಿದ ಗಜರಾಜ..!

ಯಮುನಾ ನಗರ (ಹರಿಯಾಣ): ಒಂಟಿ ಸಲಗವೊಂದು ಕಾಡಿನಿಂದ ರಾಷ್ಟ್ರೀಯ ಹೆದ್ದಾರಿಗೆ ಬಂದು ಎರಡು ಗಂಟೆಗಳಿಗೂ ಅಧಿಕ ಕಾಲ ಮೋಜು ಮಸ್ತಿ ಮಾಡಿದ ಘಟನೆ ಹರಿಯಾಣದ ಯಮುನಾ ನಗರ-ಪಾವೋಂಟಾ ಸಾಹಿಬ್​ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆನೆ ಜಾಲಿಯಾಗಿ ಅಡ್ಡಾಡಿದೆ. ಈ ವೇಳೆ, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಯಾಣಿಕರು ಗಜರಾಜನ ಚೇಷ್ಟೆ ಕಣ್ತುಂಬಿಕೊಂಡರು. ರಸ್ತೆಯಿಂದ ಆನೆಯನ್ನು ಓಡಿಸುವುದಕ್ಕೆ ಪ್ರಯಾಣಿಕರು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಆನೆಯನ್ನು ಓಡಿಸಿದರು. ಯಮುನಾ ನಗರ-ಪಾವೋಂಟಾ ಸಾಹಿಬ್‌ ಮಾರ್ಗವು ಕಾಲೇಸರ್ ಅರಣ್ಯ ಉದ್ಯಾನದ ಮೂಲಕ ಹಾದು ಹೋಗುತ್ತದೆ. ಕಾಲೇಸರ್ ಅರಣ್ಯ ಉದ್ಯಾನವು ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ. ಸಾಮಾನ್ಯವಾಗಿ ರಾಷ್ಟ್ರೀಯ ಉದ್ಯಾನದ ಕಾಡು ಪ್ರಾಣಿಗಳು ಆಗಾಗ್ಗೆ ಕಾಡುಗಳಿಂದ ರಸ್ತೆಗಳಿಗೆ ಬರುವುದು ಮಾಮೂಲಿಯಾಗಿದೆ.

Related posts

Chandrayaan-3: ಕಕ್ಷೆಗೆ ಸೇರಿದ ಚಂದ್ರಯಾನ–3, ಐತಿಹಾಸಿಕ ಸಾಧನೆಗೆ ಸಾಕ್ಷಿಯಾದ ಭಾರತ

ಶ್ರೀರಾಮನ ಚಿತ್ರವಿರುವ ಪೇಪರ್​ ತಟ್ಟೆಯಲ್ಲಿ ಬಿರಿಯಾನಿ ಮಾರಾಟ..! ಅಂಗಡಿ ಮಾಲೀಕ ಅರೆಸ್ಟ್, ಇಲ್ಲಿದೆ ವೈರಲ್ ವಿಡಿಯೋ

3ನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮಕೊಟ್ಟಳೆಂದು ಪತ್ನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪತಿ..! ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಸಾವು..!