ಮಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಹುದ್ಧೆಗೆ ನಡೆದ ಚುನಾವಣೆಯಲ್ಲಿ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಕಿರಿಯ ಮಗ ಡಾ.ರೇಣುಕಾ ಪ್ರಸಾದ್ ಭರ್ಜರಿ ಗೆಲುವುಗಳಿಸಿದ್ದಾರೆ. ರೇಣುಕಾ ಪ್ರಸಾದ್ 3295 ಮತಗಳನ್ನು ಪಡೆದುಕೊಂಡರೆ ಅವರ ಹಿರಿಯ ಸಹೋದರ ಡಾ ಚಿದಾನಂದ ಕೆವಿ 1741 ಮತ ಪಡೆದು ಸೋಲು ಅನುಭವಿಸಿದರು. ಕಣದಲ್ಲಿದ್ದ ಮತ್ತೋರ್ವ ಸ್ಪರ್ಧಿ ಹೇಮಚಂದ್ರ ಚಿಲ್ದಡ್ಕ 346 ಮತಗಳನ್ನು ಪಡೆದುಕೊಂಡರು.1554 ಮತಗಳ ಅಂತರದ ಗೆಲುವು ಪಡೆದು ರೇಣುಕಾ ಪ್ರಸಾದ್ ಮಿಂಚಿದರು.