Latestದೇಶ-ವಿದೇಶವೈರಲ್ ನ್ಯೂಸ್

ಹೋಳಿ ಆಚರಣೆಗೆ ಮುಂಚಿತವಾಗಿ ಮಸೀದಿಗಳಿಗೆ ಟಾರ್ಪಲಿನ್ ಹೊದಿಕೆ..! 3,500 ಭದ್ರತಾ ಸಿಬ್ಬಂದಿ ನಿಯೋಜನೆ..!

744
Spread the love

ನ್ಯೂಸ್ ನಾಟೌಟ್: ಹೋಳಿ ಮೆರವಣಿಗೆಗೂ ಮುಂಚಿತವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಸೀದಿಗಳನ್ನು ಟಾರ್ಪಲಿನ್‌ನಿಂದ ಮುಚ್ಚಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಶಹಜಹಾನ್‌ಪುರ ಹುತಾತ್ಮರ ಭೂಮಿಯಾಗಿದ್ದು, ಸಾಮರಸ್ಯದ ಆಚರಣೆಗಾಗಿ ಶಾಂತಿ ಸಮಿತಿಯ ಸಮಾಲೋಚನೆಗಳ ಮೂಲಕ ಒಂದು ತಿಂಗಳ ಹಿಂದೆಯೇ ಅಡಿಪಾಯ ಹಾಕುವ ಕೆಲಸ ಪ್ರಾರಂಭವಾಯಿತು ಎಂದು ಎಸ್‌ಪಿ ರಾಜೇಶ್ ಎಸ್ ಎಎನ್‌ಐ ನೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.

ಶಹಜಹಾನ್‌ ಪುರದಲ್ಲಿ ಲಾತ್ ಸಹಾಬ್ ಹೋಳಿ ಸಮಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಅಧಿಕಾರಿಗಳು 3,500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಆಚರಣೆಯ ಸಮಯದಲ್ಲಿ ಶಾಂತಿಯನ್ನು ಕಾಪಾಡಲು ಅಧಿಕಾರಿಗಳು ಮಸೀದಿಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಿದ್ದಾರೆ. ಲಾತ್ ಸಾಹಿಬ್ ಪ್ರದೇಶಕ್ಕೆ ವಿಶೇಷ ಗಮನ ನೀಡಲಾಗಿದ್ದು, ಎರಡೂ ಬದಿಗಳಲ್ಲಿರುವ ಎಲ್ಲಾ ಮಸೀದಿಗಳನ್ನು ಭದ್ರಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

See also  ನಟ ದರ್ಶನ್ ಹುಟ್ಟುಹಬ್ಬದ ದಿನವೇ ಅಭಿಮಾನಿಗಳು ಹಾಕಿದ್ದ ಬ್ಯಾನರ್ ಕಿತ್ತೆಸೆದ ಪುರಸಭೆ ಸಿಬ್ಬಂದಿ..! ಇಲ್ಲಿದೆ ಕಾರಣ
  Ad Widget   Ad Widget   Ad Widget   Ad Widget