Latestಅಟೋಮೊಬೈಲ್ದೇಶ-ವಿದೇಶ

ಭಾರತಕ್ಕೆ ಮೊದಲ ಬಾರಿಗೆ ವಿದೇಶದಿಂದ ಟೆಸ್ಲಾದ ಸೈಬೆರ್‌ ಟ್ರಕ್‌ ಕಾರು ಖರೀದಿಸಿ ತಂದ ಉದ್ಯಮಿ..! ಈ ಕಾರು ಭಾರತದಲ್ಲಿ ಇನ್ನೂ ಲಾಂಚ್​​ ಆಗಿಲ್ಲ..!

1.1k

ನ್ಯೂಸ್ ನಾಟೌಟ್: ಅಮೆರಿಕದಲ್ಲಿ ಜನಪ್ರಿಯ ಎಲೆಕ್ಟ್ರಿಕ್ ಕಾರ್ ​​ಗಳನ್ನು ಉತ್ಪಾದಿಸುವ ಕಂಪನಿ ಟೆಸ್ಲಾ. ಈ ಕಂಪನಿಯಿಂದ ಬಹುನೀರಿಕ್ಷಿತ ಸೈಬೆರ್‌ ಟ್ರಕ್‌ ಎಲೆಕ್ಟ್ರಿಕ್ ಪಿಕ್ ಅಪ್(Tesla Cybertruck) ಈ ಕಾರಿ​ಗಾಗಿ ಜನ 2019ರಿಂದಲೂ ಕಾದಿದ್ದರು. ಕೊನೆಗೆ ಈ ಕಾರು 2023ರಲ್ಲಿ ಬಿಡುಗಡೆಯಾಗಿತ್ತು. ಈಗ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಈ ಕಾರನ್ನ ಒಬ್ಬ ಉದ್ಯಮಿ ಖರೀದಿಸಿದ್ದಾರೆ.

ಇಡೀ ಭಾರತದ ಕಾರು ಲವರ್ಸ್​​ಗಳಿಗೆ ಶಾಕ್​ ಕೊಟ್ಟಿದ್ದು ಸೂರತ್​ ಮೂಲದ ಉದ್ಯಮಿ ಲವ್ಜಿ ಬಾದ್‌ ಶಾ ಅಮೆರಿಕದ ಟೆಸ್ಲಾ ಸೈಬೆರ್‌ ಟ್ರಕ್‌ ಕಾರನ್ನು ಖರೀದಿಸಿದ್ದಾರೆ. ಈ ಟೆಸ್ಲಾ ಕಾರು ಭಾರತದಲ್ಲಿ ಇನ್ನೂ

ಲಾಂಚ್ ​​ ಆಗಿಲ್ಲ. ಆದರೂ ಪಟ್ಟು ಬಿಡದ ಬಾದ್ ​ಶಾ, ಈ ಕಾರನ್ನ ಸ್ಪೆಷಲ್ಲಾಗಿ ದುಬೈನಿಂದ ಆಮದು ಮಾಡಿಕೊಂಡಿದ್ದಾರೆ.

ಸೋಷಿಯಲ್​ ಮೀಡಿಯಾದ ತುಂಬಾ ದುಬೈ ನಂಬರ್ ಪ್ಲೇಟ್‌ ಇರೋ ಈ ಟೆಸ್ನಾ ಸೈಬರ್‌ ಟ್ರಕ್‌ ಎಲೆಕ್ಟ್ರಿಕ್ ಪಿಕ್ ಅಪ್ ಕಾರ್ ​ನ ಓಡಾಟದ ಫೋಟೋ ವಿಡಿಯೋಗಳು ವೈರಲ್​ ಆಗ್ತಿರೋದನ್ನ ನೋಡಿ, ಅನೇಕರಿಗೆ ಶಾಕ್​ ಆಗಿದೆ. ದುಬೈ ನಂಬರ್​ ಪ್ಲೇಟ್​ ಇರೋ ಕಾರನ್ನ ಇಲ್ಲಿಗೇಗೆ ತಂದು ಓಡಿಸ್ತಿದ್ದಾರೆ ಅನ್ನೋ ಶಾಕ್​ ಈಗಲೂ ಹಲವರನ್ನ ಕಾಡ್ತಿದೆ. ಜೊತೆಗೆ ಭಾರತದ ವ್ಯಕ್ತಿ, ಕಾರು ದೇಶಕ್ಕೆ ಬರುವ ಮುನ್ನವೇ ಮನೆ ಮುಂದೆ ನಿಲ್ಲಿಸಿದ್ದು, ದೇಶಾದ್ಯಂತ ಭಾರಿ ಕುತೂಹಲವನ್ನ ಹುಟ್ಟುಹಾಕಿದೆ.

ಬಹುಶಃ ಹಾಲಿವುಡ್ ಸಿನಿಮಾ ಸೆಟ್‌ ನಿಂದ ಏನಾದರೂ ಈ ಕಾರ್​​ ಬಂದಿದೆಯೇನೋ ಎಂದು ಬಾದ್ ​ಶಾ ಮನೆ ಮುಂದೆ ಜನರು ನಿಂತು ನೋಡುತ್ತಿದ್ದಾರೆ ಎನ್ನಲಾಗಿದೆ.
ಎಲಾನ್ ಮಸ್ಕ್ ಟೆಸ್ಲಾ ಕಾರ್ ​ಗಳನ್ನ ಭಾರತದಲ್ಲಿ ಲಾಂಚ್​ ಮಾಡಿದ್ದರು.ಆದರೇ ಸೈಬೆರ್ ಟ್ರಕ್ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡದಿದ್ದರೂ ಸಹ, ಅದು ಭಾರತಕ್ಕೆ ಆಮದಾಗಿರಲಿಲ್ಲ ಮತ್ತು ಇಲ್ಲಿ ತನಕ ಭಾರತದಲ್ಲಿ ಅದು ಬಿಡುಗಡೆಯಾಗಿಲ್ಲ. ನಿಜಕ್ಕೆ ಈ ಸೈಬರ್‌ ಟ್ರಕ್ ಕಾರನ್ನ ಭಾರತಕ್ಕೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಅಮೆರಿಕದಿಂದ ತರುವ ಬದಲು ಬಾದ್ ​ಶಾ ಅದನ್ನ ದುಬೈನಿಂದ ಖರೀದಿಸಿ ಮುಂಬೈಗೆ ತಂದು, ಮುಂಬೈ ಮೂಲಕ ಕೊನೆಗೆ ಸೂರತ್‌ ಗೆ ತಂದಿದ್ದಾರೆ.  

ನಾವು ನೆಮ್ಮದಿಯಿಂದ ಬದುಕಬೇಕು.. ನೀನು ಬಂದು ಶರಣಾಗು ಎಂದ ಉಗ್ರನ ತಾಯಿ..! ಭಯೋತ್ಪಾದಕರ ಮನೆಗಳು ನೆಲಸಮ, ಸಂಬಂಧಿಕರು ವಶಕ್ಕೆ..!

27 ವರ್ಷದ ವ್ಯಕ್ತಿಯಿಂದ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ..! ನಿರ್ಮಾಣ ಹಂತದ ಕಟ್ಟಡದಲ್ಲಿ ಆಕೆಯ ಮೃತದೇಹ ಪತ್ತೆ..!

See also  ಮಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಗೆ 1.60 ಕೋಟಿ ರೂ. ವಂಚನೆ..! ವಿದೇಶದಲ್ಲಿ ಕಲಿಯುತ್ತಿರುವ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸುವುದಾಗಿ ಬೆದರಿಕೆ..!
  Ad Widget   Ad Widget   Ad Widget   Ad Widget