ಜೀವನಶೈಲಿ

1 ಲೀಟರ್ ಕತ್ತೆಯ ಹಾಲಿಗೆ 10 ಸಾವಿರ ರೂಪಾಯಿ !, ಕಾಸ್ಲಿ ಗುರು ಕತ್ತೆ ಹಾಲು..!

722

ನವದೆಹಲಿ: ಎಲ್ಲಾದರೂ ಹೋಗಿ ಕತ್ತೆ ಹಾಲು ಕುಡಿ… ಆಗ ಬುದ್ಧಿ ಬರುತ್ತೆ ಎಂದು ಕೆಲವು ಸಲ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ರೇಗುವುದುಂಟು. ಆದರೆ ಇನ್ನು ಮುಂದೆ ಯಾರೂ ಕೂಡ ಕತ್ತೆ ಹಾಲನ್ನು ಅಷ್ಟೊಂದು ಕಡೆಗಣಿಸಬೇಕಿಲ್ಲ. ಏಕೆಂದರೆ ಕತ್ತೆ ಹಾಲಿಗೆ ಈಗ ಹೆಚ್ಚು ಮಹತ್ವ ಬಂದಿದೆ. ಎಲ್ಲೆಡೆಯಿಂದ ಭರ್ಜರಿ ಡಿಮ್ಯಾಂಡ್ ಇದೆ. ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ. ಇಂದಿನ ದಿನಗಳಲ್ಲಿ ಕತ್ತೆ ಹಾಲಿಗೆ ಇರುವ ಬೇಡಿಕೆ ಹಸುವಿನ ಹಾಲಿಗೂ ಇಲ್ಲ. ಹೌದು, ಹಸುವಿನ ಹಾಲಿಗೆ ಲೀಟರ್‌ ಗೆ 44 ರೂ. ಆಗಿದ್ದರೆ ಕತ್ತೆ ಹಾಲು ಲೀಟರ್ ಗೆ ಬರೋಬ್ಬರಿ 10 ಸಾವಿರ ರೂ. ಆಗಿದೆ.

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಕತ್ತೆಯ ಹಾಲಿಗೆ ಹೆಚ್ಚು ಬೇಡಿಕೆಯಿದೆ. ಸದ್ಯ 1 ಲೀಟರ್ ಗೆ 10 ಸಾವಿರ ರೂಪಾಯಿಗಳಂತೆ ಮಾರಾಟವಾಗುತ್ತಿದೆ. ಕತ್ತೆಯ ಹಾಲಿನಲ್ಲಿ ಅತ್ಯಧಿಕ ರೋಗ ನಿರೋಧಕ ಶಕ್ತಿಯಿದೆ. ಈ ಹಾಲನ್ನು ಕುಡಿಯುವುದರಿಂದ ಕರೋನಾದಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಬಹುದು ಎಂದು ಮಾರಾಟಗಾರರು ಹೇಳುತ್ತಿದ್ದಾರೆ. ಹೀಗಾಗಿ ಕತ್ತೆಯ ಹಾಲಿಗೆ ಭಾರೀ ಬೇಡಿಕೆ ಬಂದಿದೆ. ಕತ್ತೆಯ ಹಾಲಿಗಾಗಿ ಮುಗಿಬೀಳುವುದಕ್ಕೆ ಇನ್ನೂ ಒಂದು ಕಾರಣವಿದೆ. ಕತ್ತೆಯ ಹಾಲು ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸುತ್ತದೆ. ಮಕ್ಕಳಲ್ಲಿ ನ್ಯುಮೋನಿಯಾ ಉಂಟಾಗದಂತೆ ಕತ್ತೆಯ ಹಾಲು ತಡೆಯುತ್ತದೆ. ಕೆಮ್ಮು, ಜ್ವರ, ಕಫ ಮೊದಲಾದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಕೆಲಸ ಮಾಡುತ್ತದೆ. ಒಂದು ವಿಶೇಷವೆಂದರೆ ಕತ್ತೆಯ ಹಾಲಿನ ಒಂದು ಚಮಚಕ್ಕೆ 100 ರೂ. ಬೆಲೆಯಿದೆ. ಚರ್ಮ, ದೇಹ ಎರಡಕ್ಕೂ ಕತ್ತೆ ಹಾಲು ಒಳ್ಳೆಯದು ಅನ್ನುವ ಮಾತಿದೆ.

See also  ಸಿಹಿ ಕುಂಬಳಕಾಯಿ ಬೀಜವನ್ನು ಬಿಸಾಡುತ್ತಿದ್ದೀರಾ?ಅದರ ಪ್ರಯೋಜನಗಳನ್ನು ತಿಳಿದುಕೊಂಡರೆ ಮತ್ತೆಂದೂ ಎಸೆಯುವುದಕ್ಕೆ ಮನಸ್ಸೇ ಬಾರದು
  Ad Widget   Ad Widget   Ad Widget   Ad Widget   Ad Widget   Ad Widget   Ad Widget