ನ್ಯೂಸ್ ನಾಟೌಟ್: ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಯಾರಾದರೂ ಪ್ರಯಾಣಿಕರೊಂದಿಗೆ ಸಾಕು ಪ್ರಾಣಿಗಳು ಕೂಡಾ ಪ್ರಯಾಣಿಸುತ್ತಿದ್ದರೆ ಅವುಗಳನ್ನು ಕಾರ್ಗೋ ಕಂಪಾರ್ಟ್‌ಮೆಂಟ್ ನಲ್ಲಿ ಇರಿಸಲಾಗುತ್ತದೆ. ಇನ್ನೂ ಕಡಿಮೆ ತೂಕ ಹೊಂದಿರುವ ಸಾಕು ಪ್ರಾಣಿಗಳಿಗೆ ಕ್ಯಾಬಿನ್ ನಲ್ಲಿ ಪ್ರಯಾಣಿಸುವಂತಹ ಅವಕಾಶವನ್ನು ಕೂಡಾ ಕೆಲವು ವಿಮಾನಯಾನ ಸಂಸ್ಥೆಗಳು ನೀಡಿವೆ.
ಆದ್ರೆ ಇಲ್ಲೊಬ್ಬ ವ್ಯಕ್ತಿ ನನಗೆ ಇಮೋಷನಲ್ ಸಪೋರ್ಟ್ ಬೇಕೆಂದು ದೈತ್ಯ ಗಾತ್ರದ ಗ್ರೇಟ್ ಡೇನ್ ತಳಿ ನಾಯಿಯನ್ನೇ ವಿಮಾನದೊಳಕ್ಕೆ ಕರೆ ತಂದಿದ್ದಾನೆ. ಈ ದೈತ್ಯ ಸಾಕು ನಾಯಿಯನ್ನು ನೋಡಿ ವಿಮಾನದಲ್ಲಿದ್ದ ಪ್ರಯಾಣಿಕರು ಹೆದರಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಷ್ಟು ದೊಡ್ಡ ಗಾತ್ರದ ನಾಯಿಯನ್ನು ವಿಮಾನದೊಳಕ್ಕೆ ಬಿಡಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. 4 ದಿನಗಳ ಹಿಂದಿನ ಘಟನೆ ಇದಾಗಿದ್ದು, ಈಗ ವೈರಲ್ ಆಗುತ್ತಿದೆ.
ಗ್ರೇಟ್ ಡೇನ್ ತಳಿ ಶ್ವಾನಗಳು ಸುಮಾರು 50 ರಿಂದ 82 ಕೆಜಿಗಳಷ್ಟು ತೂಕವನ್ನು ಹೊಂದಿರುತ್ತವೆ. ಇಂತಹ ದೈತ್ಯ ಶ್ವಾನವನ್ನೇ ಪ್ರಯಾಣಿಕನೊಬ್ಬ ನನಗೆ ಇಮೋಷನ್ ಸಪೋರ್ಟ್ ಬೇಕೆಂದು ವಿಮಾನದೊಳಕ್ಕೆ ಕರೆ ತಂದಿದ್ದಾನೆ.
Click