ನ್ಯೂಸ್ ನಾಟೌಟ್:ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಗಿ ಮೊನಾಲಿಸಾಳಿಗೆ ಬಾಲಿವುಡ್ ಸಿನಿಮಾ ಆಫರ್ ಮಾಡಿತ್ತು.ಇದಾದ ಬಳಿಕ ಆಕೆ ಜಾಹಿರಾತು ಪ್ರಮೋಷನ್ ಗೂ ಕೇರಳಕ್ಕೆ ಬಂದಿದ್ದಳು.ಹೀಗೆ ಇನ್ನೇನು ಆಕೆ ಬಾಲಿವುಡ್ ನಲ್ಲಿ ಮಿಂಚೋದಕ್ಕೆ ಶುರುವಾಗುತ್ತಿದ್ದಾಳೆ ಅನ್ನುವಷ್ಟರಲ್ಲಿಯೇ ಆಕೆಗೆ ಅವಕಾಶ ಕೊಟ್ಟ ನಿರ್ದೇಶಕ ಸನೋಜ್ ಮಿಶ್ರಾ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಡಿ ದೆಹಲಿ ಹೈಕೋರ್ಟ್ ಮೆಟ್ಟೇಲೇರಿದ್ದ ಸನೋಜ್ ಮಿಶ್ರಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.
ಇದರ ಬೆನ್ನಲ್ಲೇ ಪೊಲೀಸರು ಸನೋಜ್ ಮಿಶ್ರಾ ಅರೆಸ್ಟ್ ಮಾಡಿದ್ದಾರೆ.ನಟಿಯಾಗಲು ಅವಕಾಶ ಕೇಳಿ ಬಂದು ಮೋಸ ಹೋಗಿದ್ದೇನೆ ಎಂದು ಯುವತಿಯೊಬ್ಬಳು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಸನೋಜ್ ಮಿಶ್ರಾರನ್ನು ಬಂಧಿಸಿದ್ದಾರೆ. ಈ ಮೂಲಕ ಮೊನಾಲಿಸಾ ಸಿನಿಮಾ ಕರಿಯರ್ ಕೂಡ ಅರ್ಧಕ್ಕೆ ನಿಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇಷ್ಟೇ ಅಲ್ಲ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಕೇಳಿಬಂದ ಆರೋಪ ಹಲವರನ್ನು ದಿಗ್ಭ್ರಮೆಗೊಳಿಸಿದೆ. ಮುಗ್ಧ ಹುಡುಗಿ ಮೊನಾಲಿಸಾಗೆ ಬಣ್ಣದ ಬದುಕಿನ ಆಸೆ ತೋರಿಸಿ ಕರಿಯರ್ ಹಾಳು ಮಾಡುವ ಸಾಧ್ಯತೆ ಇದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲ ಇದೇ ಕಾರಣದಿಂದ ಹಲವು ಬಾರಿ ಅಬಾರ್ಶನ್ ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದಕ್ಕೆ ಕೆಲ ದಾಖಲೆಯನ್ನು ಒದಗಿಸಿದ್ದಾಳೆ ಎನ್ನಲಾಗಿದೆ.
ಸನೋಜ್ ಮಿಶ್ರಾ ಬಂಧನ ಮಾಹಿತಿ ಹೊರಬೀಳುತ್ತಿದ್ದಂತೆ ಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾ ಸಿನಿಮಾ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ಸನೋಜ್ ಮಿಶ್ರಾ ಈ ಸಿನಿಮಾ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಹೆಸರಿಗಷ್ಟೇ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಮುಗ್ದ ಹುಡುಗಿ ಮೊನಾಲಿಸಾಳಿಗೆ ನಟನೆ ತರಬೇತಿ ನೀಡುತ್ತಿರುವ ಸನೋಜ್ ಮಿಶ್ರಾ ಮೇಲೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ಸಿನಿಮಾದ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.