ಕ್ರೀಡೆ/ಸಿನಿಮಾ

ಹೇಗಿದೆ ನೋಡಿ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಎಂ.ಎಸ್‌. ಧೋನಿ ನ್ಯೂ ಲುಕ್‌

649
Spread the love

ರಾಂಚಿ: ಧೋನಿ ವ್ಯಕ್ತಿತ್ವಕ್ಕೆ ಅಭಿಮಾನಿಗಳ ದೊಡ್ಡ ಬಳಗ ಒಂದೆಡೆಯಾದರೆ , ಅವರ ವಿಭಿನ್ನ ಹೇರ್ ಸ್ಟೈಲ್ ಗೂ ಫಿದಾ ಆದವರು ಅನೇಕ ಮಂದಿ.  ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಪ್ರತಿ ಬಾರಿ ಐಪಿಎಲ್ ಗೆ ಒಂದೊಂದು ಹೇರ್ ಸ್ಟೈಲ್ ಮೂಲಕ ಜನರನ್ನು ಸೆಳೆಯುತ್ತಾರೆ. 

ಈ ಬಾರಿ ವಿಶೇಷ ಲುಕ್ ನಲ್ಲಿ ಧೋನಿ ಕಾಣಿಸಿ ಕೊಂಡಿದ್ದು, ಈ ಬಾರಿ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 14 ರ ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಅದಕ್ಕೂ ಮೊದಲು ಧೋನಿ ಮತ್ತೊಂದು ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಧೋನಿಯ ಹೊಸ ವಿಶಿಷ್ಟ ಹೇರ್ ಸ್ಟೈಲ್ ಜೊತೆಗೆ ದಾಡಿ ಬಿಟ್ಟುಕೊಂಡ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಂದಿನಂತೆ ಅವರ ಮೆಚ್ಚಿನ ಆಲಿಂ ಹಕೀಂ ಈ ಹೊಸ ವಿನ್ಯಾಸ ನೀಡಿದ್ದಾರೆ. ಈ ಹೇರ್ ಸ್ಟೈಲ್ ನಲ್ಲಿ ಅವರು ಮತ್ತಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ ಎನ್ನುವುದು ವಿಶೇಷ . 

See also  “ವಿರಾಟ್​ ನೀವು ನಿಜವಾಗಿಯೂ ದೇವರ ಮಗು” ಪತಿ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ..!ಕೊಹ್ಲಿ ದಾಖಲೆಯ ಶತಕದ ಬಗ್ಗೆ ನಟಿ ಅನುಷ್ಕಾ ಶರ್ಮಾ ಬರೆದುಕೊಂಡಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget