ಕ್ರೈಂ

ಶತಾಯುಷಿ ತೆಕ್ಕಿಲ್ ಕುಂಞಿ ಆಮಿನುಮ್ಮಾ ಪೇರಡ್ಕ ನಿಧನ

942

ಗೂನಡ್ಕ: ಇಲ್ಲಿನ ಪೇರಡ್ಕದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ ಪುತ್ರಿ, ದಿ। ಪೆರಾಜೆ ಅಬ್ದುಲ್ ರಹಿಮಾನ್ ರವರ ಪತ್ನಿ 104 ವರ್ಷ ಪ್ರಾಯದ ಕುಂಞಿ ಆಮಿನುಮ್ಮಾ ತೆಕ್ಕಿಲ್ ಅಲ್ಪ ಕಾಲದ ಅಸೌಖ್ಯದಿಂದ ಪೇರಡ್ಕ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಇವರು ಪ್ರತಿಷ್ಠಿತ ತೆಕ್ಕಿಲ್ ಮನೆತನದ ದಿ। ಮೊಹಮ್ಮದ್ ಹಾಜಿಯವರ ಪ್ರಥಮ ಪುತ್ರಿ.

ಇವರು ಸಹೋದರಿಯರಾದ ದಿ। ಆಮು ಹಾಜಿ ಅಡಿಮರಡ್ಕ ರವರ ಪತ್ನಿ ದಿ। ನೆಬೀಸಾ ತೆಕ್ಕಿಲ್ ಅಡಿಮರಡ್ಕ ಅರಂತೋಡು, ದಿ। ಚೊಕ್ಕಾಡಿ ಶೇಣಿ ಮಹಮ್ಮದ್ ರವರ ಪತ್ನಿ ದಿ। ಮರಿಯಮ್ಮ ತೆಕ್ಕಿಲ್, ದಿ। ಎಚ್ ಎಂ ಅಬ್ಬಾಸ್ ಹಾಜಿ ಅರಂತೋಡು ರವರ ಪತ್ನಿ ಬೀಫಾತಿಮ ತೆಕ್ಕಿಲ್ ಅರಂತೋಡು,ಕಾಸರಗೊಡಿನ ಎಂ ಎ ಅಬೂಬಕ್ಕರ್ ಹಾಜಿ ಮುನಂಬಾ ಚೆಂಗಳ ರವರ ಪತ್ನಿ ಆಯಿಷಾ ತೆಕ್ಕಿಲ್ ಚೆಂಗಳ, ನಿವೃತ್ತ ಪೊಲೀಸ್ ಸಹಾಯಕ ಕಮಿಷನರ್ ದಿ। ಸಿ ಎಂ ಇಕ್ಬಾಲ್ ರವರ ಪತ್ನಿ ಝೈಬುನ್ನಿಸಾ ತೆಕ್ಕಿಲ್ ಬೆಂಗಳೂರು, ಸಹೋದರರಾದ ದಿ। ಟಿ ಅಬ್ದುಲ್ಲಾ ತೆಕ್ಕಿಲ್ ಪೇರಡ್ಕ ಗೂನಡ್ಕ, ದಿ। ಇಬ್ರಾಹಿಂ ಹಾಜಿ ತೆಕ್ಕಿಲ್ ಪೇರಡ್ಕ ಗೂನಡ್ಕ, ಟಿ ಎಂ ಅಹ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಟಿ ಎಂ ಮೊಯಿದೀನ್ ಕುಂಞಿ ತೆಕ್ಕಿಲ್ ಚೆರ್ಕಲ, ಟಿ ಎಂ ಬಾಬಾ ಹಾಜಿ ತೆಕ್ಕಿಲ್ ಅರಂತೋಡು, ಟಿ ಎಂ ಮುಸಾನ್ ಹಾಜಿ ತೆಕ್ಕಿಲ್ ಗೂನಡ್ಕ, ಮಕ್ಕಳಾದ ಬೀಫಾತಿಮ, ಝುಲೈಕ, ಆಯಿಷಾ, ಉಮೈಬಾ, ಖದೀಜಾ, ನಫೀಸಾ, ಝುಬೈದಾ, ಸುದೀರ್ಘ ಕಾಲ ಪೇರಡ್ಕ ಮಸೀದಿಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿ। ಪಿ ಎ ಮಹಮ್ಮದ್ ಕುಂಞಿ ಪೇರಡ್ಕ, ಅಹ್ಮದ್ ಕುಂಞಿ, ಅಶ್ರಫ್ ಪೇರಡ್ಕ, ಅಬೂಬಕ್ಕರ್ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

See also  ಪ್ರೇಮಿಗಳೆಂದು ಭಾವಿಸಿ ಸಹೋದರ ಮತ್ತು ಸಹೋದರಿಯನ್ನು ಥಳಿಸಿದ ಮುಸ್ಲಿಂ ಯುವಕರು..! ದಾರಿ ತಪ್ಪಿದ ನೈತಿಕ ಪೊಲೀಸ್ ಗಿರಿ, ಕುಟುಂಬಸ್ಥರು ಕಂಗಾಲು..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget