ಕ್ರೈಂ

ಗ್ರಾಮ ಪಂಚಾಯತ್ ಸದಸ್ಯೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಸೈಕೋ ಪ್ರೇಮಿ..?

598
Spread the love

ಚೆಂಬು: ಕೊಡಗು ಜಿಲ್ಲೆ ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಪಂಚಾಯತ್ ಸದಸ್ಯೆ ಕಮಲಾ ಕೇಶವ್ ಎಂಬುವವರನ್ನು ಹೊಳೆಗೆ ದೂಡಿ ಹಾಕಿದ್ದ ಸೈಕೋ ಪ್ರೇಮಿ ಕಾಡಿನಲ್ಲಿ ಆಕೆಯನ್ನು ಕೊಂದು ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ನ್ಯೂಸ್ ನಾಟೌಟ್ ತಂಡಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಬ್ಬರ ಮೃತದೇಹವೂ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸೈಕೋ ಪ್ರೇಮಿ ಹೊತ್ತೊಯ್ದಿದ್ದ ಹೊಳೆಯಿಂದ 1 ಕಿ.ಮೀ ದೂರದ ದಟ್ಟ ಕಾಡಿನಲ್ಲಿ ಇಬ್ಬರ ಶವ ಪತ್ತೆಯಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಏನಿದು ಘಟನೆ?

ನಿನ್ನೆ ಸಂಜೆ ಏಳು ಗಂಟೆಗೆ ಕಾರ್ಯಕ್ರಮ ಒಂದನ್ನು ಮುಗಿಸಿ ಡಬಡ್ಕ ಸೇತುವೆ ಬಳಿ ಕಮಲಾ ಕೇಶವ್ ನಡೆದುಕೊಂಡು ಬರುತ್ತಿದ್ದಾಗ ಮುತ್ತು ಎನ್ನುವ ಸೈಕೋ ಪ್ರೇಮಿ ಅವರನ್ನು ಹೊಳೆಗೆ ತಳ್ಳಿ ಹಾಕಿದ್ದಾನೆ. ಮಾತ್ರವಲ್ಲ ಬಳಿಕ ತಾನೂ ಹೊಳೆಗೆ ಇಳಿದು ಆಕೆಯನ್ನು ಹೊತ್ತುಕೊಂಡು ಕಾಡಿನ ಒಳಕ್ಕೆ ಹೋಗಿದ್ದಾನೆ ಎಂದು ಊರವರು ಹೇಳಿಕೊಳ್ಳುತ್ತಿದ್ದಾರೆ. ಮುತ್ತು ಅನ್ನುವವ ಮುಂಚಿನಿಂದಲೂ ಕಮಲಾ ಅವರನ್ನು ಪ್ರೀತಿಸುತ್ತಿದ್ದ, ಪಾಗಲ್‌ ಪ್ರೇಮಿ ಕಮಲಾ ಅವರಿಗೆ ಮದುವೆಯಾಗಿದ್ದರೂ ಅವರನ್ನು ಕಾಡಿಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

See also  ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಗೆ ಬಲಿ, ಇಬ್ಬರು ನಕ್ಸಲ್ ಮಹಿಳೆಯರಿಗೂ ಗಾಯ , ಐನೆಕಿದು ಗ್ರಾಮಕ್ಕೆ ಬಂದಿದ್ದವನು ನಕ್ಸಲ್ ನಿಗ್ರಹ ಪಡೆಗೆ ಸಿಕ್ಕಿದ್ದೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget