ನ್ಯೂಸ್ ನಾಟೌಟ್: ಅಮೆರಿಕದಲ್ಲಿ ವಾಂಟೆಡ್ ಕ್ರಿಮಿನಲ್ ಆಗಿರುವ ಲಿಥುವೇನಿಯಾದ ವ್ಯಕ್ತಿಯೊಬ್ಬನನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈತ ಬೃಹತ್ ಕ್ರಿಪ್ಟೋಕರೆನ್ಸಿ ವಂಚನೆಗಾಗಿ ಆರೋಪಿ. ಅಲೆಕ್ಸೆಜ್ ಬೆಸಿಯೊಕೊವ್ ಎಂಬಾತನೇ ಬಂಧಿತ. ಈತ ರಾನ್ಸಮ್ ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ‘ಗ್ಯಾರಂಟೆಕ್ಸ್’ ಎಂಬ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದಾನೆಂದು ಆರೋಪಿಸಲಾಗಿದೆ.ಬೆಸಿಯೊಕೊವ್ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಕೇರಳ ಪೊಲೀಸರ ಜಂಟಿ ಪ್ರಯತ್ನದಿಂದ ಕೇರಳದ ತಿರುವನಂತಪುರದಲ್ಲಿ ಬೆಸ್ಸಿಯೊಕೊವ್ ಅವರನ್ನು ಬಂಧಿಸಲಾಗಿದೆ.ಅವರನ್ನು ಶೀಘ್ರದಲ್ಲಿಯೇ ಪಟಿಯಾಲಾ ಕೋರ್ಟ್ ನಲ್ಲಿ ಹಾಜರುಪಡಿಸಲಾಗುವುದು ಎಂದು ವರದಿ ಹೇಳಿದೆ.