ಕ್ರೈಂ

ಸುಳ್ಯ: ತೆಂಗಿನ ಕಾಯಿ ತೆಗೆಯಲು ಮರ ಹತ್ತಿದ ವ್ಯಕ್ತಿ ಬಾವಿಗೆ ಬಿದ್ದು ಸಾವು

375
Spread the love

ಸುಳ್ಯ : ಅಮರಮುಡ್ನೂರು ಗ್ರಾಮದ ಕೋನಕಜೆ ಎಂಬಲ್ಲಿ ಯುವಕನೊಬ್ಬ ತೆಂಗಿನ ಮರದಿಂದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕೋನಕಜೆ ನಿವಾಸಿ ಆನಂದ (35 ) ಎಂಬವರ ಮೃತದೇಹ ಅವರ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು ಬಾವಿಯ ಪಕ್ಕದ ತೆಂಗಿನ ಮರಕ್ಕೆ ಹತ್ತಿದ್ದ ಅವರು ಅಲ್ಲಿಂದ ಕಾಲು ಜಾರಿ ಪಕ್ಕದಲ್ಲಿರುವ ಬಾವಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಬಾವಿಯಲ್ಲಿ ತೆಂಗಿನಕಾಯಿಗಳು ಕೂಡ ಇವೆ. ಆನಂದರ ಪತ್ನಿ ಮನೆಯಲ್ಲಿರಲಿಲ್ಲ. ಇತರ ಯಾರೂ ಮನೆಯಲ್ಲಿ ಇಲ್ಲದಿರುವುದರಿಂದ ಗುರುವಾರ ನಡೆದ ಘಟನೆ ಶುಕ್ರವಾರ ಗೊತ್ತಾಗಿದೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಮತ್ತು ಮಗುವನ್ನು ಅವರು ಅಗಲಿದ್ದಾರೆ.

See also  ಬಿಗ್ ಬಾಸ್‌ ಮಾಜಿ ಸ್ಪರ್ಧಿ,ಲಾಯರ್​ ಜಗದೀಶ್​ರನ್ನು ಬಂಧಿಸಿದ ಪೊಲೀಸರು!
  Ad Widget   Ad Widget   Ad Widget   Ad Widget   Ad Widget   Ad Widget