9 ತಿಂಗಳು, 100 ಕೋಟಿ ಡೋಸ್ ಕರೋನಾ ಲಸಿಕೆ ವಿತರಣೆ, ಉಘೇ ಭಾರತ

4

ನವದೆಹಲಿ: ಕೋವಿಡ್ ಪಿಡುಗಿನ ವಿರುದ್ಧ ದೇಶದಾದ್ಯಂತ ಆರಂಭವಾದ ಲಸಿಕಾ ಅಭಿಯಾನವು 9 ತಿಂಗಳ ಬಳಿಕ 100 ಕೋಟಿ ಡೋಸ್ ಗಳನ್ನು ಪೂರ್ಣಗೊಳಿಸಿದೆ. ಭಾರತ ಈ ಮಹತ್ವದ ಮೈಲಿಗಲ್ಲನ್ನು ಗುರುವಾರ ದಾಖಲಿಸಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಟ್ವಿಟ್ ಮಾಡಿದ್ದಾರೆ.

100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೋವಿಡ್ ಲಸಿಕೆ ಅಭಿಯಾನ ಶುರುವಾಗಿ ಕೇವಲ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ವಿತರಿಸಿರುವುದು ಯಾವುದೇ ರಾಷ್ಟ್ರಕ್ಕೇ ಆದರೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿದ್ದಾರೆ. 

ಭಾರತದ ಜನರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿರುವ ಅವರು, ಲಸಿಕೆ ಅಭಿಯಾನವು ಸ್ಥಿರವಾಗಿ ಮುಂದುವರಿಯುವುದು ಮುಖ್ಯವಾಗಿದೆ. ದೇಶದ ಶೇಕಡ 75ರಷ್ಟು ವಯಸ್ಕರಿಗೆ ಮೊದಲ ಡೋಸ್ ಲಸಿಕೆ ಹಾಕಲಾಗಿದ್ದು, ಶೇಕಡ 25ರಷ್ಟು ವಯಸ್ಕರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಉಚಿತ ಲಸಿಕೆ ಪಡೆಯಲು ಅರ್ಹರಾಗಿದ್ದರೂ ಅವರು ದೂರ ಉಳಿದಿದ್ದಾರೆ ಎಂದಿದ್ದಾರೆ.  ದೇಶದ ಶೇಕಡ 30ರಷ್ಟು ಜನರು ಮಾತ್ರವೇ ಕೋವಿಡ್–19 ಲಸಿಕೆಯ ಎರಡೂ ಡೋಸ್ ಗಳನ್ನು ಹಾಕಿಸಿಕೊಂಡಿದ್ದಾರೆ. ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದಿರುವ ಸುಮಾರು 10 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆಯಬೇಕಿದೆ. ಅವರಿಗೆ 2ನೇ ಡೋಸ್ ಹಾಕಿಸಿಕೊಳ್ಳುವಂತೆ ನೆನಪಿಸುವ ಸಂದೇಶಗಳನ್ನು ಕಳುಹಿಸಬೇಕಿದೆ ಎಂದು ಪೌಲ್ ತಿಳಿಸಿದ್ದಾರೆ. 

Related Articles

Latestಕ್ರೈಂದೇಶ-ಪ್ರಪಂಚದೇಶ-ವಿದೇಶರಾಜ್ಯ

ತಲೆಗೆ ಗುಂಡು ತಗುಲಿ ಕರ್ನಾಟಕ ಮೂಲದ ಯೋಧ ಸಾವು..! ‘ಮಿಸ್‌ಫೈರ್‌’ ಎಂದ ಸೇನಾಧಿಕಾರಿ..!

ನ್ಯೂಸ್‌ ನಾಟೌಟ್: ಬೆಳಗಾವಿಯ ಮೂಡಲಗಿ ತಾಲೂನಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಬುಧವಾರ...

Latestಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅತಿಯಾದ ಸಾಲ ಮಾಡಿದ್ದ ಕುಡುಕ ಗಂಡ..! ಸಾಲ ವಸೂಲಿಗೆ ಬರ್ತಿದ್ದ ಯುವಕನನ್ನೇ ಮದುವೆಯಾದ ಮಹಿಳೆ..!

ನ್ಯೂಸ್‌ ನಾಟೌಟ್: ಗಂಡನ ಅತಿಯಾದ ಮದ್ಯಪಾನದ ಚಟದಿಂದ ಬೇಸತ್ತಿದ್ದ ಪತ್ನಿ, ಆತನ ಸಾಲ ವಸೂಲಿಗೆ ಬರುತ್ತಿದ್ದ...

Latestದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಆಂಧ್ರದ ಓಂಗೋಲ್ ತಳಿಯ ಹಸು ಬ್ರೆಜಿಲ್‌ ನಲ್ಲಿ 41 ಕೋಟಿಗೆ ಹರಾಜು..! ಜಗತ್ತಿನ ಅತೀ ದುಬಾರಿ ಹಸು..!

ನ್ಯೂಸ್‌ ನಾಟೌಟ್: ಆಂಧ್ರಪ್ರದೇಶದ ಓಂಗೋಲ್ ತಳಿಯ ಹಸು, ಬ್ರೆಜಿಲ್‌ ನಲ್ಲಿ 41 ಕೋಟಿಗೆ ಹರಾಜಾಗಿದೆ. ಇದೀಗ...

Latestಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅನುಮಾನಗೊಂಡು ಸ್ಮಶಾನದಲ್ಲಿ ಸಿಸಿಟಿವಿ​ ಅಳವಡಿಸಿದ ಸ್ಥಳೀಯರಿಗೆ ಕಂಡದ್ದೇನು..?

ನ್ಯೂಸ್‌ ನಾಟೌಟ್: ಮಧ್ಯಪ್ರದೇಶದ ಭೋಪಾಲ್ ​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ...

@2025 – News Not Out. All Rights Reserved. Designed and Developed by

Whirl Designs Logo