ಕರಾವಳಿ

ಸುಳ್ಯ: ಯುವಕನಿಗೆ ಒಂದೇ ಬಾರಿಗೆ ಎರಡು ಸಲ ಕೊರೋನಾ ಲಸಿಕೆ ನೀಡಿದ ನರ್ಸ್..!

31

ಸುಳ್ಯ: ಕರೋನಾ ಲಸಿಕೆ ಪಡೆದುಕೊಳ್ಳುವುದಕ್ಕೆ ಸರಕಾರ ಮಾರ್ಗಸೂಚಿ ಮಾಡಿಕೊಂಡಿದೆ. ಮೊದಲ ಡೋಸ್ ಪಡೆದ ನಂತರ ನಿರ್ದಿಷ್ಟ ಅವಧಿಯ ಸಮಯವಿರುತ್ತದೆ, ಇದಾದ ಬಳಿಕ ಎರಡನೇ ಡೋಸ್ ಪಡೆದುಕೊಳ್ಳಲು ಅವಕಾಶವಿದೆ. ಆದರೆ ಸುಳ್ಯದಲ್ಲೊಬ್ಬರು ನರ್ಸ್ ಲಸಿಕಾ ಶಿಬಿರದಲ್ಲಿ ಯುವಕನೋರ್ವನಿಗೆ ಎರಡು ಸಲ ಲಸಿಕೆ ನೀಡಿದ ಘಟನೆ ನಡೆದಿದೆ. ವಿಷಯ ತಿಳಿದು ಮನೆಯವರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಡೋಸ್ ನೀಡಿದ ಆರೋಗ್ಯ ಸಹಾಯಕಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?

ಸುಳ್ಯ ತಾಲೂಕಿನ ದುಗಲಡ್ಕ ಪ್ರೌಢ ಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ ನಡೆದಿದೆ. ಅಲ್ಲಿಗೆ ಬಾಲಸುಬ್ರಹ್ಮಣ್ಯಂ ಎಂಬುವವರ ಮಗ ಕೆ.ಬಿ ಅರುಣ್‌ ಕುಮಾರ್‌ ಎನ್ನುವವರು ಬಂದಿದ್ದಾರೆ. ಮೊದಲ ಹಂತದ ಡೋಸ್ ತೆಗೆದುಕೊಳ್ಳಲು ನೋಂದಣಿ ಮಾಡಿಸಿಕೊಂಡಿದ್ದರು. ಅಂತೆಯೇ ನರ್ಸ್ ಅವರಿಗೆ ಮೊದಲ ಡೋಸ್ ನೀಡಿದರು. ಮಾತ್ರ ತೆಗೆದುಕೊಳ್ಳುವುದಕ್ಕಾಗಿ ಅರುಣ್‌ ಅಲ್ಲಿಯೇ ಕುಳಿತಿದ್ದರು. ಈ ಸಂದರ್ಭದಲ್ಲಿ ಅದನ್ನು ಅರ್ಥ ಮಾಡಿಕೊಳ್ಳದ ನರ್ಸ್‌ ಅವರಿಗೆ ಮತ್ತೊಂದು ಬಾರಿಗೆ ಇಂಜೆಕ್ಷನ್ ಚುಚ್ಚಿದ್ದಾಳೆ. ಈ ವಿಷಯ ತಿಳಿದ ತಕ್ಷಣ ಒಂದು ಸಲ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬಳಿಕ ತಾಲೂಕು ವೈದ್ಯಾಧಿಕಾರಿಗಳನ್ನು ಮನೆಯವರು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಅವರು ಗಾಬರಿ ಪಡುವುದು ಬೇಡ, ಚೆನ್ನಾಗಿ ಆಹಾರ ಸೇವಿಸುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.