ಕ್ರೈಂ

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೊಡಗಿನ ಯುವತಿಯರು

ಮಡಿಕೇರಿ: ಇಬ್ಬರು ವಿದ್ಯಾವಂತ ಯುವತಿಯರು ಕೌಟುಂಬಿಕ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಬಿ ಶೆಟ್ಟಿಗೇರಿ ಗ್ರಾಮದಿಂದ ವರದಿಯಾಗಿದೆ.

ನಾಮೇರ ಉದಯ ಎಂಬುವವರ ಪುತ್ರಿಯರಾದ ದಮಯಂತಿ (20 ) ಹಾಗೂ ಹರ್ಷಿತಾ (18) ಎಂದು ಗುರುತಿಸಲಾಗಿದೆ. ಇಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ದಮಯಂತಿ ಹಳ್ಳಿಗಟ್ಟು ಸಿಇಟಿ ಕಾಲೇಜ್‌ನಲ್ಲಿ ಇಂಜೀನಿಯರಿಂಗ್ ಹಾಗೂ ಹರ್ಷಿತಾ ಕಾವೇರಿ ಗೋಣಿಕೊಪ್ಪ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು. ಸದ್ಯ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಅತ್ಯಾಚಾರಕ್ಕೊಳಗಾಗಿದ್ದ 9ನೇ ತರಗತಿ ವಿದ್ಯಾರ್ಥಿನಿ ದುರಂತ ಸಾವು! ಅಪಹರಣದ ಬಳಿಕ ಪ್ರಕರಣ ರಾಜಕೀಯ ತಿರುವು ಪಡೆದದ್ದು ಹೇಗೆ?

ಅಯೋಧ್ಯೆ​ ದೇವಸ್ಥಾನದ ಅರ್ಚಕ ನಿಗೂಢ ಸಾವು..! ರಾಮ ಜನ್ಮಭೂಮಿಯಲ್ಲಿ ಅರ್ಚಕನಿಗೇನಾಯ್ತು? ಗುರುವಿಗೆ ಶಿಷ್ಯರೇ ಮುಹೂರ್ತ ಇಟ್ಟರಾ?

ಚಲಿಸುತ್ತಿದ್ದ ಕಾರಿನಿಂದ ಬಟ್ಟೆ ಹರಿದು ಮಹಿಳೆಯನ್ನು ಹೊರದಬ್ಬಿದ ಅಪರಿಚಿತರು! ಇಲ್ಲಿದೆ ವಿವಾಹಿತ ಮಹಿಳೆಯ ಕಣ್ಣೀರ ಕಥೆ!