ನವದೆಹಲಿ: ಅಮೃತಸರದ ಸಂಯೋಜಿತ ಅವಳಿಗಳಾದ ಸೋಹ್ನಾ ಮತ್ತು ಮೋಹ್ನಾಗೆ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉದ್ಯೋಗ ಲಭಿಸಿದೆ.
19ರ ಹರೆಯದ ಸೋಹ್ನಾ ಡಿಸೆಂಬರ್ 20 ರಂದು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಮೋಹ್ನಾ ಜೊತೆಗೆ ವಿದ್ಯುತ್ ಉಪಕರಣಗಳನ್ನು ನೋಡಿಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮಗೆ ಕೆಲಸದ ಬಗ್ಗೆ ತುಂಬಾ ಸಂತೋಷವಾಗಿದೆ ಮತ್ತು ಡಿಸೆಂಬರ್ 20 ರಂದು ಸೇರಿದ್ದೇವೆ. ಅವಕಾಶಕ್ಕಾಗಿ ನಾವು ಪಂಜಾಬ್ ಸರ್ಕಾರ ಮತ್ತು ಪಿಂಗಲ್ವಾರಾ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಈ ಅವಳಿಗಳು ಹೇಳಿದ್ದಾರೆ.