ನ್ಯೂಸ್ ನಾಟೌಟ್: ಕಳೆದ ಕೆಲವು ಸಮಯದಿಂದ ವಿಚ್ಛೇದನದ ವದಂತಿಯಲ್ಲಿ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ಐಶ್ವರ್ಯ ರೈ ಸುದ್ದಿಯಲ್ಲಿದ್ದರು. ಇದೀಗ ಅವರಿಬ್ಬರು ಒಟ್ಟಿಗೆ ದೇವಾಲಯಕ್ಕೆ ಬಂದು ಆಶೀರ್ವಾದ ಪಡೆದಿದ್ದಾರೆ. ಇಸ್ಕಾನ್ ನ ಹರಿನಾಮ ದಾಸ್ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರ ಫೋಟೋಗಳನ್ನು ಹಂಚಿಕೊಂಡಿದ್ದು ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ..
ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ವೃಂದಾವನ ಧಾಮದ ಆಶೀರ್ವಾದ ಪಡೆಯಲು ಸಂತೋಷವಾಗುತ್ತಿದೆ ಎಂದು ಹರಿನಾಮ ದಾಸ್ ಬರೆದಿದ್ದಾರೆ. ಅಶುತೋಷ್ ಗೋವಾರಿಕರ್ ಅವರ ಮಗನ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಲು ಬಂದಾಗ ಈ ಫೋಟೋಗಳನ್ನು ತೆಗೆಯಲಾಗಿದೆ.
ವಿಚ್ಛೇದನದ ವದಂತಿಗಳನ್ನು ಎದುರಿಸುತ್ತಿದ್ದ ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅನಂತ್ ಅಂಬಾನಿ ಮದುವೆಯಲ್ಲಿ ಪ್ರತ್ಯೇಕವಾಗಿ ಭಾಗವಹಿಸಿದಾಗ ವಿಚ್ಛೇದನದ ಸುದ್ದಿಗಳು ಹಬ್ಬಿದ್ದವು.ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 20 ಏಪ್ರಿಲ್ 2007 ರಂದು ಮುಂಬೈನಲ್ಲಿ ವಿವಾಹವಾದರು. ಆದರೆ, ಇತ್ತೀಚೆಗೆ ಎಲ್ಲಿಯೇ ಹೋದರೂ ಇಬ್ಬರೂ ಬೇರೆ ಬೇರೆಯಾಗಿ ಹೋಗುತ್ತಿದ್ದರಿಂದ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಹೆಚ್ಚಾಗಿತ್ತು.ಜತೆಗೆ ಅವರಿಬ್ಬರಲ್ಲಿ ಮನಸ್ತಾಪವಿದೆ ಎಂಬ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿತ್ತು.