ನವದೆಹಲಿ: ಭಾರತ ಮತ್ತು ಚೀನಾ ಯೋಧರ ನಡುವೆ ಮತ್ತೆ ಘರ್ಷಣೆ ಸಂಭವಿಸಿದೆ. ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯ ಸಮೀಪದಲ್ಲಿ ಚೀನಾದ ಸುಮಾರು 200 ಯೋಧರನ್ನು ಹಿಮ್ಮೆಟ್ಟಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವಾರ ಚೀನಾದ ಗಡಿಗೆ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ. ಗಡಿಗೆ ಸಮೀಪ ಬಂದಿದ್ದ ಚೀನಾದ ಸುಮಾರು 200 ಯೋಧರನ್ನು ಭಾರತದ ಪಡೆಗಳು ತಡೆದು ಹಿಂದಕ್ಕೆ ಕಳುಹಿಸಿದೆ.
previous post