ನ್ಯೂಸ್ ನಾಟೌಟ್:ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರು ವತಿಯಿಂದ “ಚೆಸ್”ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಚೆಸ್ ನುರಿತ ಶಿಕ್ಷಕರಿಂದ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಲವಲವಿಕೆ ಹಾಗೂ ಚುರುಕುತನದ ಯಶಸ್ವಿ, ಮೊಬೈಲ್ ಬಳಕೆಯಿಂದ ದೂರವಿರಿಸುವಿಕೆಯ ಪ್ರಯತ್ನದ ಕಲ್ಪನೆಯೊಂದಿಗೆ ಪ. ವರ್ಗದ ಸಭಾ ಭವನ,ಗ್ರಾಮ ಪಂಚಾಯತ್ ಗುತ್ತಿಗಾರು ಇಲ್ಲಿ ವಿದ್ಯಾರ್ಥಿಗಳು ಒಟ್ಟಾಗಲಿದ್ದಾರೆ.ಮೇ.೫ರಂದು ಈ ಕಾರ್ಯಗಾರವು ಪ್ರಾರಂಭವಾಗಲಿದ್ದು, ಬೆಳಿಗ್ಗೆ 9ರಿಂದ ಮದ್ಯಾಹ್ನ 1ರವರೆಗೆ, 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳ ಪೋಷಕರು ಈ ನಂಬರ್ ಗೆ ಕರೆ ಮಾಡಬಹುದು- 7892948475 9686987113.