ಭಕ್ತಿಭಾವ

ಸುಳ್ಯ: ಚೆನ್ನಕೇಶವ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ, ಹಸಿರುವಾಣಿ ಮೆರವಣಿಗೆ

685

ಸುಳ್ಯ: ಇಲ್ಲಿನ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಇಂದಿನಿಂದ ಬ್ರಹ್ಮಕಲಶಾಭಿಷೇಕ ಆರಂಭಗೊಂಡಿದೆ. ಈ ಪ್ರಯುಕ್ತವಾಗಿ ಇಂದು ಬೆಳಗ್ಗೆ ಸುಳ್ಯದಲ್ಲಿ ಹಸಿರುವಾಣಿ ಮೆರವಣಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಹೇಗಿತ್ತು ಮೆರವಣಿಗೆ?

ಸುಳ್ಯದ ಜ್ಯೋತಿ ವೃತ್ತ ಹಾಗೂ ವಿಷ್ಣು ಸರ್ಕಲ್ ಬಳಿಯಿಂದ ಹಸಿರುವಾಣಿ ಮೆರವಣಿಗೆ ಆರಂಭವಾಯಿತು. ಸುಳ್ಯ ಜ್ಯೋತಿ ವೃತ್ತದ ಬಳಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ. ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ವಿಷ್ಣು ಸರ್ಕಲ್ ಬಳಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸದಸ್ಯ ಎನ್.ಎ. ರಾಮಚಂದ್ರ ಚಾಲನೆ ನೀಡಿದರು. ಎರಡು ಕಡೆಯಿಂದ ಏಕಕಾಲದಲ್ಲಿ ಹೊರಟ ಮೆರವಣಿಗೆ ಸುಳ್ಯದ ರಥಬೀದಿಯಲ್ಲಿ ಎದುರುಗೊಂಡು ಅಲ್ಲಿಂದ ಜತೆಯಾಗಿ ದೇವಸ್ಥಾನಕ್ಕೆ ತೆರಳಿದವು.

See also  ಕುಕ್ಕೆ ಶ್ರೀ ಸುಬ್ರಹ್ಮಣ್ಯನಿಗೇ ಎದುರಾಗಿತ್ತು ಒಂದು ಸಮಸ್ಯೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget