ಕ್ರೀಡೆ/ಸಿನಿಮಾ

ಒಲಿಂಪಿಕ್ಸ್ ಪದಕ ವಿಜೇತೆ ಮೀರಾ ಬಾಯಿ ಜೀವನ ಚರಿತ್ರೆ ಸಿನಿಮಾ ತೆರೆಗೆ ಸಿದ್ಧತೆ? ಹೀರೋಯಿನ್ ಗಾಗಿ ಹುಡುಕಾಟ

ಮಣಿಪುರ: ಕ್ರೀಡಾಪಟುಗಳ ಸಾಧನಾಗಾಥೆಯ ಸಿನಿಮಾಗಳು ಈ ಹಿಂದೆ ತೆರೆ ಕಂಡಿದ್ದು, ಅವುಗಳಲ್ಲಿ ಅನೇಕ ಚಿತ್ರಗಳು ಹಿಟ್ ಲಿಸ್ಟಿಗೆ ಸೇರಿವೆ. ಮೇರಿಕೋಮ್, ಎಂ.ಎಸ್‌. ಧೋನಿ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳು ಸಿನಿ ರಸಿಕರ ಮನಗೆದ್ದಿವೆ. ಇದೀಗ  ಒಲಿಂಪಿಕ್ಸ್ ಪದಕ ವಿಜೇತೆ ಸೈಖೋಮ್ ಮೀರಾಬಾಯಿ ಚಾನು ಅವರ ಜೀವನ ಆಧಾರಿತ ಮಣಿಪುರಿ ಚಿತ್ರ ನಿರ್ಮಾಣವಾಗಲಿದ್ದು ಸೆಟ್ಟೇರಲು ಸಜ್ಜಾಗಿದೆ.

ಚಿತ್ರದ ಕುರಿತ ಒಪ್ಪಂದಕ್ಕೆ ಚಾನು ಕಡೆಯವರು ಮತ್ತು ಇಂಫಾಲ್ ಮೂಲದ ‘ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್’ ಸಂಸ್ಥೆಯವರು ಶನಿವಾರ ಸಹಿ ಮಾಡಿದ್ದಾರೆ.ಇಂಫಾಲ್ ಪೂರ್ವ ಜಿಲ್ಲೆಯ ನೋಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಚಾನು ನಿವಾಸದಲ್ಲಿ ಈ ಒಪ್ಪಂದ ಏರ್ಪಟ್ಟಿದೆ ಎಂದು ಪ್ರಖ್ಯಾತ ನಾಟಕಕಾರ ಮತ್ತು ಚಿತ್ರ ನಿರ್ಮಾಣ ಕಂಪನಿಯ ಮುಖ್ಯಸ್ಥ ಮನೊಬಿ ಎಂ ಎಂ ಪ್ರಕಟಣೆ ನೀಡಿದ್ದಾರೆ.  ಚಿತ್ರವು ಇಂಗ್ಲಿಷ್ ಸೇರಿದಂತೆ ಭಾರತದ ಇತರ ಭಾಷೆಗಳಿಗೂ ಡಬ್ ಆಗಲಿದೆ ಎಂದು ಮಾಹಿತಿ ಲಭ್ಯ ಆಗಿದೆ.ಆದರೆ ಎಷ್ಟು ಭಾಷೆಗಳಲ್ಲಿ ಇರಲಿದೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಚಿತ್ರದ ಕುರಿತ ಒಪ್ಪಂದಕ್ಕೆ ಚಾನು ಕಡೆಯವರು ಮತ್ತು ಇಂಫಾಲ್ ಮೂಲದ ‘ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್’ ಸಂಸ್ಥೆಯವರು ಶನಿವಾರ ಸಹಿ ಮಾಡಿದ್ದಾರೆ.ಇಂಫಾಲ್ ಪೂರ್ವ ಜಿಲ್ಲೆಯ ನೋಂಗ್ ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಚಾನು ನಿವಾಸದಲ್ಲಿ ಈ ಒಪ್ಪಂದ ಏರ್ಪಟ್ಟಿದೆ ಎಂದು ಪ್ರಖ್ಯಾತ ನಾಟಕಕಾರ ಮತ್ತು ಚಿತ್ರ ನಿರ್ಮಾಣ ಕಂಪನಿಯ ಮುಖ್ಯಸ್ಥ ಮನೊಬಿ ಎಂ ಎಂ ಪ್ರಕಟಣೆ ನೀಡಿದ್ದಾರೆ.

Related posts

‘ಕೆಜಿಎಫ್ ತಾತಾ’ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ

‘ಕಾಲ ಬದಲಾಗುತ್ತದೆ,ನಿಮ್ಮ ಮೇಲೆ ಭರವಸೆ ಇಟ್ಟುಕೊಳ್ಳಿ..!’ಅಂದು ಕಸ ಸಂಗ್ರಹ,ಇಂದು ಲಕ್ಷಾಂತರ ರೂ.ಗಳಿಸುವ ಖ್ಯಾತ ನಟಿ..!ಇವರು ಅಷ್ಟು ಎತ್ತರಕ್ಕೆ ಬೆಳೆದಿದ್ದೇಗೆ?

ಪಾಕ್‌ ಕ್ರಿಕೆಟಿಗನ ಮುಖದಿಂದ ರಕ್ತ ಸುರಿಯುತ್ತಿದ್ದದ್ದನ್ನು ನೋಡಿ ಕನ್ನಡಿಗ ಕೆ.ಎಲ್. ರಾಹುಲ್ ಮಾಡಿದ್ದೇನು..? ವೈರಲ್ ಆದ ವಿಡಿಯೋದಲ್ಲೇನಿದೆ..?