ಕರಾವಳಿ

ಚೈತನ್ಯ ಸೇವಾಶ್ರಮದಲ್ಲಿ ಗಣೇಶನಿಗೆ ವಿಶೇಷ ಪೂಜೆ, ಭಜನಾ ಸತ್ಸಂಗ ಕಾರ್ಯಕ್ರಮ

28

ಸುಳ್ಯ : ಸುಳ್ಯ ತಾಲೂಕಿನಲ್ಲಿ ಇಂದು ಎಲ್ಲೆಡೆ ಗಣೇಶ ಚತುರ್ಥಿ  ಆಚರಣೆ ನಡೆಯುತ್ತಿದೆ. ಸುಳ್ಯ ತಾಲೂಕಿನ ಅಜ್ಜಾವರ ದೇವರ ಕಳಿಯ  ಶ್ರೀ ಚೈತನ್ಯ  ಸೇವಾಶ್ರಮದಲ್ಲಿ ಗಣೇಶನಿಗೆ ವಿಶೇಷ ಪೂಜೆ  ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.

ಸೇವಾಶ್ರಮದ  ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರು  ಪೂಜೆಯ ನೇತೃತ್ವ ವಹಿಸಿದರು. ಆಶ್ರಮದ ಟ್ರಸ್ಟಿ ಪ್ರಣವಿ,  ಕೆವಿಜಿ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ಅನಿಲ್ ಬಿ.ವಿ, ಪ್ರೋ.ರೇಖಾ, ಕುಶಾಲಪ್ಪ ಅತ್ಯಾಡಿ, ಅಜ್ಜಾವರ ಮಹಿಳಾ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ಇತರರು ಉಪಸ್ಥಿತರಿದ್ದರು.