ನ್ಯೂಸ್ ನಾಟೌಟ್: ಬಡವರಿಗೆ ಸರಕಾರ ವ್ಯಾಪ್ತಿಯಲ್ಲಿರುವ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಪಂಚಾಯತ್ ನವರಿಗಿರುತ್ತೆ.ಹೀಗೆ ಸರ್ಕಾರದ ವತಿಯಿಂದ ನೀಡಲಾಗುವ ಮನೆ ಕೇಳಲು ಬಂದ ಮಹಿಳೆಗೆ ಗ್ರಾಮ ಪಂಚಾಯಿತಿ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬಗ್ಗೆ ವರದಿಯಾಗಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮನೆ ಕೇಳಲು ಬಂದ ಮಹಿಳೆಗೆ ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಮಂಚಕ್ಕೆ ಕರೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಪಂಚಾಯತಿ ಮನೆ ಮಾಡಿಸಿಕೊಡುತ್ತೇನೆ ನನ್ನ ಜೊತೆ ಮಲಕೋ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನಾದರೂ ಕಳಿಸು ಎಂದಿದ್ದಾನೆ. ಈ ಸಂಬಂಧ ಮಹಿಳೆ, ನೀಲಕಂಠ ರಾಠೋಡ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಮಳಸಾಪುರ ಗ್ರಾಮದ ಮಹಿಳೆ ಮನೆ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠಗೆ ಮನವಿ ಮಾಡಿದ್ದಾಳೆ. ಆಗ ನೀಲಕಂಠ, ಪಂಚಾಯತಿಯಿಂದ ಮನೆ ಮಾಡಿಸಿಕೊಡಲು ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಡಲು ಆಗದಿದ್ದರೆ ನನ್ನ ಜೊತೆ ಮಲಕೋ ಎಂದು ಒತ್ತಾಯ ಮಾಡಿದ್ದಾನೆ. ಅಲ್ಲದೇ ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನ ಕಳುಹಿಸು ಎಂದಿದ್ದಾನೆ. ಹೀಗಂತ ಮಹಿಳೆ ಆರೋಪಿಸಿದ್ದಾಳೆ.ಇದರಿಂದ ಆಕ್ರೋಶಗೊಂಡ ಮಹಿಳೆ, ಮಳಸಾಪುರ ಗ್ರಾಮದಿಂದ ಮರಗುತ್ತಿ ಪಂಚಾಯತಿಗೆ ಆಯ್ಕೆಯಾಗಿರುವ ನೀಲಕಂಠನ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಮೇರೆಗ ಪೊಲೀಸರು ಬಿಎನ್ಎಸ್ ಕಾಯ್ದೆ 75, 78,79 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.