ಕ್ರೈಂ

ಸುಳ್ಯ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಗೆ ಗುದ್ದಿ ಪಲ್ಟಿ ಹೊಡೆದ ಕಾರು, ಓರ್ವನಿಗೆ ಗಂಭೀರ ಗಾಯ

728

ಸುಳ್ಯ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಐದು ಜನರ ಪೈಕಿ ಮೂವರು ಗಾಯಗೊಂಡು ಉಳಿದಿಬ್ಬರು ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರು ಗ್ರಾಮದ ಬೈದರಕೊಳಂಜಿ ಎಂಬಲ್ಲಿ ಡಿ.5ರಂದು ಸಂಜೆ ಸಂಭವಿಸಿದೆ.

ಕಾಸರಗೋಡು ಕಡೆಯಿಂದ ಜಾಲ್ಸೂರು ಕಡೆಗೆ ತೆರಳುತ್ತಿದ್ದ ಕಾರು ಬೈದರಕೊಳಂಜಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ಢಿಕ್ಕಿಯಾಗಿದ್ದು, ಬೈಕ್ ರಸ್ತೆಯ ಸಮೀಪದ ತೋಟಕ್ಕೆ ಉರುಳಿದ್ದು, ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಸೋಣಂಗೇರಿ ಮೂಲದ ಫವಾಜ್,ಇಶಾನ್, ಮಸೂಕ್, ಸುನೈಫ್, ಹಸೀಬ್ ಗಾಯಗೊಂಡರೆನ್ನಲಾಗಿದೆ. ತಕ್ಷಣ ಸ್ಥಳೀಯರು ಸೇರಿ ಗಾಯಾಳುಗಳನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಕೆವಿಜಿ ಆಸ್ಪತ್ರೆಗೆ ದಾಖಲಿಸಿದರು. ಅಪಘಾತದ ರಭಸಕ್ಕೆ ಫವಾಜ್ ಅವರ ತಲೆಗೆ ಗಂಭೀರವಾದ ಗಾಯವಾಗಿದ್ದು, ಅವರನ್ನು ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

See also  ಚೀಟಿ ಹಣದ ವಿಚಾರಕ್ಕೆ ಗಲಾಟೆಯಾಗಿ ದೊಣ್ಣೆಯಿಂದ ಹೊಡೆದು ಯುವಕನ ಹತ್ಯೆ..! ಬಿಡಿಸಲು ಬಂದವರಿಗೂ ಕಚ್ಚಿದ ಆರೋಪಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget