ನಮ್ಮಲ್ಲೇ ಫಸ್ಟ್

ಮುಟ್ಟಿದ್ರೆ ಶಾಕ್ಕು…ಮೈಯೆಲ್ಲ ಶೇಖ್ಖು…ಸುಳ್ಯದಲ್ಲೊಂದು ಕರೆಂಟ್ ಹೊಡೆಸುವ ಎಟಿಎಂ..!

376
Spread the love

ಸುಳ್ಯ: ಸಾಮಾನ್ಯವಾಗಿ ಜನ ಹೆಚ್ಚು ಹೋಗುವ ಸ್ಥಳಗಳಲ್ಲಿ ಎಟಿಎಂ ಕೂಡ ಒಂದು. ಬ್ಯಾಂಕ್ ನಲ್ಲಿ ದುಡ್ಡು ತೆಗೆಯಲು ಗಂಟೆಗಟ್ಟಲೆ ಕಾಯುವುದಕ್ಕಿಂತ ಎಟಿಎಂನಲ್ಲಿ ಸೆಕೆಂಡ್ಸ್ ನಲ್ಲಿ ದುಡ್ಡು ತೆಗೆಯಬಹುದು ಎಂದು ಹೆಚ್ಚಿನವರು ಎಟಿಎಂ ನಲ್ಲೇ ಹಣ ವಿತ್ ಡ್ರಾ ಮಾಡುತ್ತಾರೆ. ಹೀಗೆ ಇಲ್ಲೊಬ್ಬ ಗ್ರಾಹಕರು ಎಟಿಎಂನಲ್ಲಿ ಹಣ ತೆಗೆಯಲು ಹೋಗಿ ಕರೆಂಟ್ ಹೊಡೆಸಿಕೊಂಡ ಘಟನೆ ಸುಳ್ಯದಲ್ಲಿ ಜನವರಿ 1 ರಂದು ಬೆಳಗ್ಗೆ ನಡೆದಿದೆ.

ಗ್ರಾಹಕರೊಬ್ಬರು ಸುಳ್ಯಕ್ಕೆ ಬಂದವರು ತುರ್ತಾಗಿ ಮೆಸ್ಕಂನಲ್ಲಿ ಕರೆಂಟ್ ಬಿಲ್ ಕಟ್ಟಬೇಕಿದ್ದರಿಂದ ಜೂನಿಯರ್ ಕಾಲೇಜಿನ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂಗೆ ಹೋಗಿದ್ದಾರೆ. ಅಲ್ಲಿ ಹಣವನ್ನೂ ವಿತ್ ಡ್ರಾ ಮಾಡಿಕೊಂಡಿದ್ದಾರೆ. ಇನ್ನೇನು ಹಣ ಡ್ರಾ ಮಾಡಿ ಹೊರಟವರಿಗೆ ಕ್ಯಾನ್ಸಲ್ ಬಟನ್ ಒತ್ತಿಲ್ಲ ಎನ್ನುವುದು ಖಚಿತವಾಗಿ ಅವರು ಹಿಂದಕ್ಕೆ ತಿರುಗಿ ಎಟಿಎಂ ಡೋರ್ ಅನ್ನು ಕೈಯಲ್ಲಿ ಹಿಡಿದುಕೊಂಡೆ ಬಲಗೈನಲ್ಲಿ ಕ್ಯಾನ್ಸಲ್ ಬಟನ್ ಒತ್ತಿದ್ದಾರೆ. ಇದ್ದಕ್ಕಿದ್ದಂತೆ ಕರೆಂಟ್ ಪ್ರವಹಿಸಿ ಯಾತನಾಮಯ ನೋವನ್ನು ಅನುಭವಿಸಿದ್ದಾರೆ.

ಗ್ರಾಹಕರು ಸ್ಥಳೀಯರಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಕೆಲವರಿಗೆ ಆ ಅನುಭವ ಆಗಿದೆ ಅನ್ನುವ ಉತ್ತರವೂ ಸಿಕ್ಕಿದೆ.

ನಾಳೆ ಗ್ರಾಹಕರು ಕರೆಂಟ್ ಹೊಡೆಸಿಕೊಂಡು ಸತ್ತರೆ ಯಾರು ಗತಿ..? ಇದನ್ನು ಬ್ಯಾಂಕ್ ನ ಉಸ್ತುವಾರಿ ಹೊತ್ತವರು ಯೋಚಿಸಬೇಕು. ಎಟಿಎಂ ಇಟ್ಟರೆ ಸಾಲದು ಅಲ್ಲಿನ ವ್ಯವಸ್ಥೆಗಳನ್ನೂ ಆಗಾಗ್ಗೆ ಚೆಕ್ ಮಾಡುವುದು ಕೂಡ ಬ್ಯಾಂಕ್ ನಿರ್ವಹಣೆ ಹೊತ್ತ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ಎಟಿಎಂಗೆ ಹೋಗುವ ಅಮಾಯಕರ ಜೀವ ಉಳಿಸಬೇಕು ಅನ್ನುವುದು ನ್ಯೂಸ್ ನಾಟೌಟ್ ತಂಡದ ಕಳಕಳಿಯಾಗಿದೆ.

See also  ಗೋಳಿತೊಟ್ಟು -ಕೊಕ್ಕಡ ರಸ್ತೆಗೆ ಸಚಿವ ಅಂಗಾರ ಗುದ್ದಲಿ ಪೂಜೆ, 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ
  Ad Widget   Ad Widget   Ad Widget   Ad Widget   Ad Widget   Ad Widget