ಕ್ರೈಂ

ಉದ್ಯಮಿ ಹತ್ಯೆಗೆ ಸಂಚು ರೂಪಿಸಿದ್ದ ಎಂಟು ಆರೋಪಿಗಳ ಬಂಧನ

358
Spread the love

ಯಲ್ಲಾಪುರ: ಉದ್ಯಮಿಯ ಮನೆಗೆ ಹೋಗಿ ಹಲ್ಲೆ ನಡೆಸಿದ್ದಲ್ಲದೇ ಅವರ ಹತ್ಯೆಗೆ ಸಂಚು ಹೂಡಿದ ಆರೋಪದ ಮೇಲೆ ಎಂಟು ಮಂದಿ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಪಟ್ಟಣದ ಸಬಗೇರಿ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ ರೇವಣಕರ್ ಎಂಬುವವರ ಮನೆಗೆ ಶುಕ್ರವಾರ ರಾತ್ರಿ ಕೆಲವು ಅಪರಿಚಿತರು ಬಂದು ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಕಿತ್ತುಕೊಂಡು ಹೋದ ಬಗ್ಗೆ ಸುರೇಶ ಅವರು ಯಲ್ಲಾಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಭಾನುವಾರ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. 

See also  ಸುಳ್ಯ: ಬಾಡಿಗೆಗೆಂದು ನಂಬಿಸಿ ಆಟೋ ರಿಕ್ಷಾ ಹತ್ತಿದ ವ್ಯಕ್ತಿ ಆಟೋವನ್ನೇ ಕದ್ದ..!
  Ad Widget   Ad Widget   Ad Widget   Ad Widget   Ad Widget   Ad Widget