ನ್ಯೂಸ್ ನಾಟೌಟ್: ಉಡುಪಿಯ ಶಾಲೆ ಸೇರಿದಂತೆ 21 ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಟೆಕ್ಕಿ ಯುವತಿಯೊಬ್ಬಳನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಮೂಲದ ರಿನಾ ಜೊಶಿಲ್ಡಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈಕೆ ತಾನು ಪ್ರೀತಿಸುತ್ತಿದ್ದ ಯುವಕ ತನ್ನನ್ನು ಒಪ್ಪಿಕೊಳ್ಳದ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಈ ರೀತಿಯ ಕೃತ್ಯ ಎಸಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಇಂಜಿನಿಯರಿಂಗ್ ಮಾಡಿದ್ದ ಯುವತಿ ರಿನಾ, ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದಳು. ತನಿಖೆ ವೇಳೆ ಆಕೆ ಹೆಸರು ಪತ್ತೆಯಾಗಿ ರಿನಾಳನ್ನು ಚೆನ್ನೈನಲ್ಲಿ ಅರೆಸ್ಟ್ ಮಾಡಲಾಗಿದೆ.
ಜೂ.16ರಂದು ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇಮೇಲ್ ನಲ್ಲಿ, ‘ನಿಮ್ಮ ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ ಎಂದು ಇಮೇಲ್ ಕಳುಹಿಸಿದ್ದಾಳೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಜರಾತ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಇಮೇಲ್ ಸಂದೇಶವನ್ನು ಆರೋಪಿ ರಿನಾ ಕಳುಹಿಸಿದ್ದಾಳೆ. ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ಕಳುಹಿಸಿದ್ದಳು, ಮತ್ತು ಆಕೆಯನ್ನು ಈಗ ಬಂಧಿಸಲಾಗಿದೆ. ರಿನಾ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಆದರೆ, ರಿನಾಳನ್ನು ಪ್ರಿಯಕರ ಒಪ್ಪದೇ ಬೇರೆ ಹುಡುಗಿ ಕೈಹಿಡಿದಿದ್ದಾನೆ. ಇದರಿಂದ ಕುಪಿತಳಾದ ರೆನಾ ತನ್ನ ತಾಂತ್ರಿಕ ಪರಿಣತಿಯಿಂದ ನಕಲಿ ಇಮೇಲ್ ಖಾತೆಗಳನ್ನು ತೆರೆದು, ತನ್ನನ್ನು ನಿರ್ಲಕ್ಷಿಸಿದ ಪ್ರಿಯಕರನ ಹೆಸರಲ್ಲಿ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ರವಾನಿಸಿದ್ದಳು.
ಕರಿ ಚಿರತೆ ಜೊತೆ ಬರಿಗೈಯಲ್ಲಿ ಏಕಾಂಗಿಯಾಗಿ ಹೋರಾಡಿದ ಕಾರ್ಮಿಕ..! ಸಹಾಯಕ್ಕೆ ಬಾರದ ಜನ..! ವಿಡಿಯೋ ವೈರಲ್