Latest

ಕುಕ್ಕೆ ದೇಗುಲದಲ್ಲಿ ಬಾಲಿವುಡ್‌ ನ ಹೆಸತರಾಂತ ನಟಿ ಕತ್ರಿನಾ ಕೈಫ್; ನಿನ್ನೆ ಸರ್ಪ ಸಂಸ್ಕಾರ ಸೇವೆ, ಇಂದು ಆಶ್ಲೇಷಾ ಬಲಿ ಪೂಜೆ ಮಾಡಿಸಿದ ನಟಿ

663
Spread the love

ನ್ಯೂಸ್‌ ನಾಟೌಟ್:ಬಾಲಿವುಡ್‌ ನ ಹೆಸರಾಂತ ನಟಿ, ಕತ್ರಿನಾ ಕೈಫ್ ಅವರು ದಕ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದ್ದರು. ಹೀಗಾಗಿ ನಿನ್ನೆಯಿಂದ (ಮಾ.11) ಕತ್ರಿನಾ ದೇವಸ್ಥಾನದಲ್ಲಿ ವಿವಿಧ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಸೇವೆಯಲ್ಲಿ ನಟಿ ಭಾಗಿಯಾಗಿದ್ದಾರೆ.

ಬಾಲಿವುಡ್ ನಟಿ ಕತ್ರಿನಾ ಕೈಫ್  (Katrina Kaif) ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿನ್ನೆ ರಾತ್ರಿ (Kukke Subramanya) ತಂಗಿದ್ದು, ದೇವಸ್ಥಾನದಲ್ಲಿ ಇಂದು (ಮಾ.12) ಆಶ್ಲೇಷಾ ಬಲಿ ಪೂಜೆಯಲ್ಲಿ ಅವರು ಭಾಗಿಯಾಗಿದ್ದಾರೆ.ಸಂತಾನ, ವ್ಯವಹಾರಿಕ, ಕೌಟುಂಬಿಕ, ಜೀವನದ ಒಳಿತಿಗಾಗಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಸುಮಲತಾ ಅಂಬರೀಶ್ ಅನ್ನು ಅನ್‌ ಫಾಲೋ ಮಾಡಿದ ನಟ ದರ್ಶನ್..! ಕುತೂಹಲ ಮೂಡಿಸಿದ ಸುಮಲತಾ ಪೋಸ್ಟ್..!

See also  ನಾವು ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇವೆ ಎಂದು ಮೆಸೇಜ್ ಕಳುಹಿಸಿ ವಧು ನಾಪತ್ತೆ..! 5 ವರ್ಷ ಪ್ರೀತಿಸಿ ನಿಶ್ಚಯವಾಗಿದ್ದ ಮದುವೆ..!
  Ad Widget   Ad Widget   Ad Widget   Ad Widget   Ad Widget   Ad Widget