ಕ್ರೈಂ

ಬೈಕ್ ಕಂತು ಬಾಕಿ ಇಟ್ಟ, ಕೇಳಿದಕ್ಕೆ ಶೋರೋಂ ಮುಂದೆಯೇ ಬೈಕ್ ಗೆ ಬೆಂಕಿ ಇಟ್ಟ ಭೂಪ..!

332
Spread the love

ಫರಂಗಿಪೇಟೆ: ಇಲ್ಲಿನ ನಿವಾಸಿ ಮಹಮ್ಮದ್ ಹರ್ಷದ್ ಎಂಬಾತ ಬೈಕ್ ಕೊಳ್ಳಲು ಖಾಸಗಿ ಫೈನಾನ್ಸ್ ಕಂಪನಿಯೊಂದರಿಂದ ಸಾಲ ಪಡೆದಿದ್ದ ಮತ್ತು ಸಾಲದ ಕಂತನ್ನು ಕಟ್ಟದೆ ಹಾಗೆಯೇ ಬಾಕಿ ಉಳಿಸಿಕೊಂಡಿದ್ದ. ಫೈನಾನ್ಸ್ ಕಂಪನಿಯು ಮಾಲೀಕರ ಕೈಯಿಂದ ಬೈಕ್ ದಾಖಲೆಗಳನ್ನು ವಶಪಡಿಸಿಕೊಂಡಿತ್ತು ಹಾಗೂ ಸಾಲದ ಕಂತನ್ನು ಕಟ್ಟುವಂತೆ ತಾಕೀತು ಮಾಡಿತ್ತು. ಹರ್ಷದ್ ಈ ವಿಚಾರವಾಗಿ ಶೋರೂಂನಲ್ಲಿದ್ದ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಇದು ಸ್ವಲ್ಪ ಸಮಯದ ನಂತರ ಈ ವಿಚಾರ ವಾಗ್ವಾದಕ್ಕೆ ತಿರುಗಿತ್ತು. ರೊಚ್ಚಿಗೆದ್ದ ಹರ್ಷದ್ ಶೋರೂಮ್ ನಿಂದ ಹೊರನಡೆದು ತನ್ನ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

See also  ನಾಯಿಯ ಶವಕ್ಕೆ ವಿಷ ಬೆರೆಸಿ ಮೂರು ಚಿರತೆಗಳ ಕೊಂದ ಪಾಪಿ.. ಬಂಡೀಪುರದಲ್ಲಿ ಭದ್ರತಾ ಸಿಬ್ಬಂದಿ ಅರೆಸ್ಟ್‌ ಆದ ಹಿಂದಿದೆ ರೋಚಕ ಕಹಾನಿ
  Ad Widget   Ad Widget   Ad Widget   Ad Widget   Ad Widget   Ad Widget