ನ್ಯೂಸ್ ನಾಟೌಟ್: ಬೈಕ್ ಸ್ಕಿಡ್ ಆಗಿ ಆಯತಪ್ಪಿ ರಸ್ತೆ ಮೇಲೆ ಬಿದ್ದ ಸವಾರನ ಮೇಲೆ ಸರ್ಕಾರಿ ಬಸ್ ಚಲಿಸಿದ ಘಟನೆ ಗದಗ ನಗರದ ಮುಳಗುಂದ ನಾಕಾದ ಬಸ್ ಡಿಪೋ ಬಳಿ ಶುಕ್ರವಾರ (ಮಾ.15) ನಡೆದಿದೆ.
ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಈರಪ್ಪ ಕಣಗಿನಹಾಳ (50) ಮೃತ ಬೈಕ್ ಸವಾರನಾಗಿದ್ದು, ಮಾರ್ಕೆಟ್ ಏರಿಯಾದಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಹೊರಟಿದ್ದರು ಎನ್ನಲಾಗಿದೆ.
ಮುಳಗುಂದ ನಾಕಾ ಬಳಿ ಸಂಚರಿಸುತ್ತಿದ್ದಾಗ, ಏಕಾಏಕಿ ಆಯತಪ್ಪಿ ಈರಪ್ಪ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಗದಗ ಹಾನಗಲ್ ಮಾರ್ಗವಾಗಿ ಹೊರಟಿದ್ದ ಬಸ್ ನ ಹಿಂಬದಿ ಚಕ್ರ ಅವರ ತಲೆ ಮೇಲೆ ಹರಿದು, ತಲೆ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.