ಕ್ರೈಂ

ಮೋಜಿನ ಬೈಕ್ ರೈಡ್ ಜೀವಕ್ಕೆ ತಂದ ಆಪತ್ತು..! ಡಾರ್ಕ್ ರೈಡರ್ಸ್ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಬಿದ್ದಿದ್ದು ಹೆಣ..!

791

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75 ರ ಎಂಜಿರ ಎಂಬಲ್ಲಿ ಬೈಕ್-ಲಾರಿ ಭೀಕರ ಅಪಘಾತ ಸಂಭವಿಸಿ ಯುವಕನೊಬ್ಬ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಮನೋಜ್‌ ಕುಂಬ್ರ (20 ವರ್ಷ ) ಎಂದು ಗುರುತಿಸಲಾಗಿದೆ. ಯುವಕರ ತಂಡ ಬೆಳಗ್ಗೆ ಕುಂಬ್ರದಲ್ಲಿ ಡಾರ್ಕ್ ರೈಡರ್ಸ್ ಪೋಸ್ಟರ್ ಬಿಡುಗಡೆಗೊಳಿಸಿದ್ದರು. ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಬಳಿಕ ಉಪ್ಪಿನಂಗಡಿ ಮೂಲಕ ಸಕಲೇಶಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಗುದ್ದಿದ ರಭಸಕ್ಕೆ ಕಂಟೈನರ್ ಲಾರಿ ಹರಿದು ಮನೋಜ್‌ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಘಟನೆ ಸಹ ಸ್ನೇಹಿತರಿಗೆ ತಿಳಿದ ತಕ್ಷಣ ಅವರು ಘಟನೆ ನಡೆದ ಸ್ಥಳಕ್ಕೆ ಆಗಮಿಸುವ ದಾರಿಯಲ್ಲಿ ಮತ್ತೊಂದು ಬೈಕ್ ಕೂಡ ಅಪಘಾತಕ್ಕೆ ತುತ್ತಾಗಿದೆ. ಅದರಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

See also  Manjummel boys: 'ಮಂಜುಮ್ಮೆಲ್ ಬಾಯ್ಸ್’ ಚಿತ್ರತಂಡಕ್ಕೆ ಲೀಗಲ್ ನೋಟಿಸ್..! ಇಳಯರಾಜರ ಕಂಟೆಂಟ್ ಕದ್ದರಾ ನಿರ್ದೇಶಕ..?
  Ad Widget   Ad Widget   Ad Widget   Ad Widget   Ad Widget